
ಮದ್ದೂರು:ಜೆಡಿಎಸ್ ಮುಖಂಡನ ಮೇಲೆ ಅಟ್ಯಾಕ್…ಬೆಳ್ಳಂಬೆಳಗ್ಗೆ ಲಾಂಗ್-ಮಚ್ಚುಗಳ ಸದ್ದು…
- Crime
- August 12, 2023
- No Comment
- 117

ಮದ್ದೂರು:ಜೆಡಿಎಸ್ ಮುಖಂಡನ ಮೇಲೆ ಅಟ್ಯಾಕ್…ಬೆಳ್ಳಂಬೆಳಗ್ಗೆ ಲಾಂಗ್-ಮಚ್ಚುಗಳ ಸದ್ದು…

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಜೆಡಿಎಸ್ ಯುವ ಮುಖಂಡನ ಮೇಲೆ ಅಟ್ಯಾಕ್ ನಡೆದಿದೆ. ಯುವ ಮುಖಂಡ ಅಪ್ಪು ಪಿ.ಗೌಡ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ.
ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದಾಳಿ ನಡೆಸಿದ್ದಾರೆ.
ದೇವಸ್ಥಾನದಲ್ಲೇ ಯುವಕರ ಗ್ಯಾಂಗ್ ಅಟ್ಯಾಕ್ ಮಾಡಿದೆ.
ಮಚ್ಚು ಲಾಂಗ್ ನಿಂದ ಅಪ್ಪು ಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಾಳು ಅಪ್ಪು ಗೌಡನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮದ್ದೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಹಳೆ ದ್ವೇಷದ ಹಿನ್ನೆಲೆ ಅಟ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದರೆ.ತಕ್ಷಣ ಎಚ್ಚೆತ್ತ ಸ್ಥಳೀಯರು.
ಇಟ್ಟಿಗೆ, ಕಲ್ಲು, ಹೂಕುಂಡಗಳನ್ನ ತೂರಿ ದುಷ್ಕರ್ಮಿಗಳನ್ನ ಓಡಿಸಿದ್ದಾರೆ.
ಅಪ್ಪುಗೌಡನನ್ನ ದುಷ್ಕರ್ಮಿಗಳಿಂದ ಬಿಡಿಸಿ ಕಾರಿಗೆ ಕೂರಿಸಿ ರಕ್ಷಣೆ ಮಾಡಿದ್ದಾರೆ.
ದುಷ್ಕರ್ಮಿಗಳು ಟಾಟಾ ಸುಮೋದಲ್ಲಿ ಬರುವ ದೃಶ್ಯ.ದುಷ್ಕರ್ಮಿಗಳಿಂದ ಅಪ್ಪುಗೌಡನನ್ನ ರಕ್ಷಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.