
ಮೈಸೂರು ಜೈಲಿನಲ್ಲಿ ಅನಾರೋಗ್ಯದಿಂದ ಸಜಾ ಖೈದಿ ಸಾವು…
- Crime
- August 13, 2023
- No Comment
- 126
ಮೈಸೂರು,ಆ13,Tv10 ಕನ್ನಡ
ಅನಾರೋಗ್ಯದಿಂದ ಬಳಲುತ್ತಿದ್ದ ಜೈಲು ಖೈದಿ ಸಾವನ್ನಪ್ಪಿದ ಘಟನೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.ಸುರೇಶ್ (60) ಮೃತ ದುರ್ದೈವಿ.ಚೆಕ್ ಬೌನ್ಸ್ ಕೇಸ್ ನಲ್ಲಿ ನವೆಂಬರ್ 2022 ರಿಂದ ಕೇಂದ್ರ ಕಾರಾಗೃಹದ ಬಂಧಿಯಾಗಿದ್ದರು.ವ್ಯಕ್ತಿಯೊಬ್ಬರಿಗೆ 18.10 ಲಕ್ಷ ಮೌಲ್ಯದ ಚೆಕ್ ನೀಡಿದ್ದು ಖಾತೆಯಲ್ಲಿ ಹಣ ಇಲ್ಲದ ಕಾರಣದಿಂದ ಬೌನ್ಸ್ ಆಗಿತ್ತು.ಆರೋಪ ಸಾಬೀತಾದ ಹಿನ್ನಲೆ ನ್ಯಾಯಾಲಯವು ಸುರೇಶ್ ರವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡು ದಿನಗಳಿಂದ ಅನಾರೋಗ್ಯಕ್ಕೆ ಸಿಲುಕಿದ್ದ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…