ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದ್ದ ಆನೆ ಸಾವು…
- TV10 Kannada Exclusive
- August 12, 2023
- No Comment
- 110
ಹುಣಸೂರು,ಆ12,Tv10 ಕನ್ನಡ
ಪಳಗಿಸಲಾಗುತ್ತಿದ್ದ ಆನೆ ಸಾವನ್ನಪ್ಪಿದ ಘಟನೆ ನಾಗರಹೊಳೆ ಅರಣ್ಯ ಪ್ರದೇಶದ ಆನೆಚೌಕೂರಿನ ಮತ್ತಿಗೂಡು ಸಾಕಾನೆ ಶಿಬಿರದಲ್ಲಿ ನಡೆದಿದೆ.50 ವರ್ಷದ ಸುಭ್ರಮಣಿ ಸಾವನ್ನಪ್ಪಿದ ಆನೆ.ಕಳೆದ ತಿಂಗಳಿಂದ ಶಿಬಿರದಿಂದ ಹೊರಗಡೆ ಸುಭ್ರಮಣಿಗೆ ಪಳಗಿಸುವ ವೇಳೆ ನಿತ್ರಾಣವಾಗಿ ಬಿದ್ದಿದೆ.ಪಶು ವೈದ್ಯಾಧಿಕಾರಿಗಳು ಅಗತ್ಯ ಚಿಕಿತ್ಸೆ ನೀಡಿದ್ದಾರೆ.ಅತಿಯಾಗಿ ಬಳಲಿದ್ದ ಆನೆಯನ್ನ ಕ್ರೇನ್ ಸಹಾಯದಿಂದ ನಿಲ್ಲಿಸಲು ಯತ್ನಿಸಿದ್ದಾರೆ.ಆದರೆ ಸುಭ್ರಮಣಿ ಚೇತರಿಸಿಕೊಂಡಿಲ್ಲ.ಆರ್ಥರಿಟೀಸ್ ನಿಂದ ಬಳಲುತ್ತಿದ್ದ ಸುಭ್ರಮಣಿ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷಕುಮಾರ್ ಚಿಕ್ಕನರಗುಂದ,ದಯಾನಂದ್,ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ…