ಅನಧಿಕೃತ ಖಾಸಗಿ ವ್ಯಕ್ತಿಗಳು ಕರ್ತವ್ಯ ನಿರ್ವಹಿಸಿದ್ರೆ ಹುಷಾರ್…ಮೈಸೂರು ತಹಸೀಲ್ದಾರ್ ಖಡಕ್ ವಾರ್ನಿಂಗ್…
- TV10 Kannada Exclusive
- August 14, 2023
- No Comment
- 131
ಅನಧಿಕೃತ ಖಾಸಗಿ ವ್ಯಕ್ತಿಗಳು ಕರ್ತವ್ಯ ನಿರ್ವಹಿಸಿದ್ರೆ ಹುಷಾರ್…ಮೈಸೂರು ತಹಸೀಲ್ದಾರ್ ಖಡಕ್ ವಾರ್ನಿಂಗ್…
ಮೈಸೂರು,ಆ14,Tv10 ಕನ್ನಡ
ಮೈಸೂರು ತಾಲೂಕು ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿ ಅನಧಿಕೃತ ಖಾಸಗಿ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತಹಸೀಲ್ದಾರ್ ಗಿರೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.ಈಗಾಗಲೇ ಇಂತಹ ಹಲವಾರು ದೂರುಗಳು ಬಂದಿದೆ.ಸಾರ್ವಜನಿಕರು ಮೌಖಿಕವಾಗಿ ನಮ್ಮ ಗಮನಕ್ಕೆ ತಂದಿದ್ದಾರೆ.ಇದರಿಂದ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.ಇನ್ನುಮುಂದೆ ತಾಲೂಕು ಕಚೇರಿ ಹಾಗೂ ಅಧೀನ ಕಚೇರಿಯಲ್ಲಿ ಅನಧಿಕೃತ ಖಾಸಗಿ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುವುದು ಕಂಡು ಬಂದಲ್ಲಿ ಅಂತಹ ನೌಕರರ ವಿರುದ್ದ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ…