ಲಯನ್ಸ್ ಕ್ಲಬ್ ಅಫ್ ಮೈಸೂರು ಅಂಬಾಸಿಡರ್ ಸಂಸ್ಥೆಯ ವತಿಯಿಂದ ಡಾ .ಸಿ.ಎಸ್ .ಸೌಮ್ಯ ರವರಿಗೆ “ರಾಯಭಾರಿ ವೈದ್ಯ ” ಪ್ರಶಸ್ತಿ
- TV10 Kannada Exclusive
- August 16, 2023
- No Comment
- 82
ಪಾಂಡವಪುರ tv10 ಕನ್ನಡ ಆ 15 ಜೀವನದ ಗುಣಮಟ್ಟವನ್ನು ಸುಧಾರಿಸಲು ಆರೋಗ್ಯವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ . 2023ರ ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶ ‘ಎಲ್ಲರಿಗೂ ಆರೋಗ್ಯ’ ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ಇರಬೇಕು . ಅದರಲ್ಲಿಯೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಜೆಪಿ ನಗರದ ಆರೋಗ್ಯ ಕೇಂದ್ರದ ಡಾಕ್ಟರ್ ಸಿ. ಎಸ್ ಸೌಮ್ಯ ರವರು ಲಯನ್ಸ್ ಕ್ಲಬ್ ಮೈಸೂರು ಅಂಬಾಸಿಡರ್ ಸಂಸ್ಥೆಯವರು “ರಾಯಭಾರಿ ವೈದ್ಯ” ಪ್ರಶಸ್ತಿಯನ್ನು ಸ್ವೀಕರಿಸಿ ಹೇಳಿದರು.
ಮುಂದುವರೆದು ಪ್ರಪಂಚ ಆಧುನಿಕತೆಯ ಕಡೆಗೆ ಹೋಗುತ್ತಿದ್ದರು ಸಹ ಹಲವು ಮಾರಣಾಂತಿಕ ರೋಗಗಳು ಹರಡುತ್ತಿರುವುದು ವಿಷಾದನೀಯ . ಹಾಗಾಗಿ ವ್ಯೆಯ್ತಕ್ತಿಕ ಸ್ವಚ್ಛತೆ ,ವ್ಯಾಯಾಮ ,ಧ್ಯಾನ ,ಒತ್ತಡ ರಹಿತ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು ಹಾವಿನ ಕಡಿತಕ್ಕೆ ನಾಟಿ ಚಿಕಿತ್ಸೆ ನೀಡಿ ಸಾವಿರಾರು ರೋಗಿಗಳನ್ನು ಗುಣಮುಖ ಮಾಡಿರುವ ಪಾಂಡವಪುರ ತಾಲೂಕಿನ ಹೊನ್ನಗಾನಹಳ್ಳಿಯ ರಾಮೇಗೌಡರವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು
37g ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ ಎಚ್ ವೆಂಕಟೇಶ್ ರವರು ಸಂಸ್ಥೆಯ ಮಾಸಿಕ ವಾರ್ತ ಸಂಚಿಕೆಯಾದ “ರಾಯಭಾರಿ” ಯನ್ನು ಬಿಡುಗಡೆ ಮಾಡಿದರು. ಹೊಸ ಸದಸ್ಯರಿಗೆ ಪ್ರಮಾಣ ಪತ್ರವನ್ನು ಲಯನ್ ಎಚ್ ಕೆ ಪ್ರಸನ್ನ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಹೆಚ್.ಸಿ. ಕಾಂತರಾಜು ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿ ಲಯನ್ ಸಿ.ಆರ್ . ದಿನೇಶ್ ಮಾಡಿದರು.