ಉಪನ್ಯಾಸಕನ ಪರಿಸರ ಪ್ರೇಮ…ಸಸ್ಯಕಾಶಿಯಾದ ಕಾಲೇಜು ಆವರಣ…

ಉಪನ್ಯಾಸಕನ ಪರಿಸರ ಪ್ರೇಮ…ಸಸ್ಯಕಾಶಿಯಾದ ಕಾಲೇಜು ಆವರಣ…

ಉಪನ್ಯಾಸಕನ ಪರಿಸರ ಪ್ರೇಮ…ಸಸ್ಯಕಾಶಿಯಾದ ಕಾಲೇಜು ಆವರಣ…

ನಂಜನಗೂಡು,ಸೆ7,Tv10 ಕನ್ನಡ

ವಿಧ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣ ಸಹಕಾರಿ ಎಂಬ ಮಾತಿಗೆ ಸಾಕ್ಷಿಯಾಗಿದೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆಯ ಸರ್ಕಾರಿ ಪದವಿ ಪೂರ್ವ ಕಾಲೇಜು.ಬರಡು ಬಯಲಾಗಿದ್ದ ಕಾಲೇಜಿನ ಆವರಣವೀಗ ಸಸ್ಯಕಾಶಿಯಾಗಿದೆ.ಕಾಲೇಜು ಉಪನ್ಯಾಸ ಹಾಗೂ ಎನ್.ಎಸ್.ಎಸ್.ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿಧ್ಯಾರ್ಥಿಗಳು,ಪ್ರಾಶುಪಾಲರು,ಸಹದ್ಯೋಗಿಗಳ ಸಹಕಾರದಿಂದ ಬರಡು ನೆಲವೀಗ ಕೆಲವೇ ವರ್ಷಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿದೆ.ಎಲ್ಲರ ಪರಿಶ್ರಮದಿಂದಾಗಿ ಕಾಲೇಜಿನ ಆವರಣ ಮಲೆನಾಡಿನ ವಾತಾವರಣವನ್ನ ಸೃಷ್ಟಿಸಿದೆ.

ಕಾಲೇಜಿನ ವಿಧ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬೆಳವಣಿಗೆಗಾಗಿ ಮೀಸಲಾಗಿದ್ದ ಜಾಗ ಬರಡಾಗಿತ್ತು.ಆಟದ ಮೈದಾನ ಹೊರತುಪಡಿಸಿ ಉಳಿದ ಜಾಗವನ್ನ ಹಸಿರೀಕರಣ ಮಾಡಲು ಉಪನ್ಯಾಸಕರಾದ ವೆಂಕಟರಮಣ ನಿರ್ಧರಿಸಿ ಕಾರ್ಯೋನ್ಮುಖರಾದರು.ಈ ವಿಚಾರದಲ್ಲಿ ಸಹದ್ಯೋಗಿಗಳು ಅಪಹಾಸ್ಯ ಮಾಡಿದ್ದೂ ಉಂಟು.ಇದ್ಯಾವುದನ್ನ ಲೆಕ್ಕಿಸದ ವೆಂಕಟರಮಣ ವಿಧ್ಯಾರ್ಥಿಗಳ ನೆರವು ಹಾಗೂ ಪ್ರಾಂಶುಪಾಲ ಸಿದ್ದರಾಜು ಮಾರ್ಗದರ್ಶನ ಪಡೆದು ಕಾಲೇಜು ಆವರಣವನ್ನ ಹಸಿರುವಲಯವಾಗಿ ಪರಿವರ್ತಿಸಲು ಪಣತೊಟ್ಟರು.ಕೆಲವು ವರ್ಷಗಳ ಕಠಿಣ ಪರಿಶ್ರಮ ಇದೀಗ ಕಾಲೇಜು ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.ಕನ್ನಡ ಪಾಠದಲ್ಲಿ ವಿಧ್ಯಾರ್ಥಿಗಳ ಮನಸ್ಸನ್ನ ಗೆದ್ದ ಉಪನ್ಯಾಸಕ ವೆಂಕಟರಮಣ ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಬೆಳವಣಿಗೆಗೆ ತಮ್ಮ ಸ್ವಂತ ಹಣ ವಿನಯೋಗಿಸಿದ್ದಾರೆ.ಕಾಲೇಜಿನಿಂದಾಗಲಿ ದಾನಿಗಳಿಂದಾಗಲಿ ನಯಾಪೈಸೆ ನೆರವು ಪಡೆದಿಲ್ಲ.ಸ್ವಂತ ಖರ್ಚಿನಲ್ಲಿ ಸುಮಾರು ಎರಡು ಎಕ್ರೆ ಬರಡು ನೆಲವನ್ನ ಸಸ್ಯಕಾಶಿಯನ್ನಾಗಿ ಪರಿವರ್ತಿಸಿದ್ದಾರೆ.ಸುಮಾರು 15 ವರ್ಷಗಳ ಪರಿಶ್ರಮ ಫಲ ನೀಡಿದೆ. ಹಸಿರುವಲಯವಾಗಿರುವ ಕಾಲೇಜು ಆವರಣವನ್ನ ವಿಧ್ಯಾರ್ಥಿಗಳು ಖುಷಿಯಿಂದ ತಮ್ಮ ಪಠ್ಯೇತರ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಿದ್ದಾರೆ.ಕನ್ನಡ ಉಪನ್ಯಾಸಕ ವೆಂಕಟರಮಣ ರವರ ಪ್ರಕೃತಿ ಪ್ರೇಮಕ್ಕೆ ಇಡೀ ಕಾಲೇಜು ಫಿದಾ ಆಗಿದೆ.ದೊಡ್ಡಕವಲಂದೆ ಜನರೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *