
ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕೆ ಮಂಜೂರು ಮಾಡಿದ ಜಾಗ ಹೇಗಿದೆ ಗೊತ್ತಾ !?…ನೋಡಿದ್ರೆ ಶಾಕ್ ಆಗ್ತೀರಾ…
- TV10 Kannada Exclusive
- September 8, 2023
- No Comment
- 137

ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕೆ ಮಂಜೂರು ಮಾಡಿದ ಜಾಗ ಹೇಗಿದೆ ಗೊತ್ತಾ !?…ನೋಡಿದ್ರೆ ಶಾಕ್ ಆಗ್ತೀರಾ…
ನಂಜನಗೂಡು,ಸೆ8,Tv10 ಕನ್ನಡ
ವಿಧ್ಯಾರ್ಥಿ ನಿಲಯ ಸ್ವಂತ ಕಟ್ಟಡಕ್ಕಾಗಿ ಸುಮಾರು ವರ್ಷಗಳ ಮನವಿಗೆ ಸ್ಪಂದಿಸಿದ ಸರ್ಕಾರ ನೀಡಿದ ಜಾಗ ಎಂಥದ್ದು ಗೊತ್ತಾ..? ಶಾಕ್ ಆಗೋದು ಗ್ಯಾರೆಂಟಿ.ಜಾಗ ನೋಡಿದ್ರೆ ಸ್ವಂತ ಕಟ್ಟಡ ನಿರ್ಮಾಣ ಕನಸೇ..? ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗಗನ ಕುಸುಮವೇ…
ಹೌದು…ಇದು ನಂಜನಗೂಡಿನಲ್ಲಿರುವಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ವಿಧ್ಯಾರ್ಥಿನಿಯರ ನಿಲಯದ ಸ್ಥಿತಿ. ನಂಜನಗೂಡಿನ ಕನ್ಯಕಾಪರಮೇಶ್ವರಿ ಬಡಾವಣೆ,ವಿದ್ಯಾನಗರ ಹಾಗೂ ಮಿನಿವಿಧಾನಸೌಧ ಹಿಂಬಾಗ ಸೇರಿದಂತೆ ಮೂರು ವಿಧ್ಯಾರ್ಥಿ ನಿಲಯಗಳು ನೂರಾರು ವಿಧ್ಯಾರ್ಥಿಗಳಿಗೆ ಆಶ್ರಯ ನೀಡಿದೆ.ಸ್ವಂತಕಟ್ಟಡ ನಿರ್ಮಾಣ ಇವರ ಕನಸು.ಇದಕ್ಕಾಗಿ ಸರ್ಕಾರದ ಮೊರೆ ಹೋದಾಗ ನಂಜನಗೂಡು ಪಟ್ಟಣದ ಎಪಿಎಂಸಿ ಮುಂಭಾಗ ಒಂದು ಎಕ್ರೆ ಸ್ಥಳ ಮಂಜೂರು ಮಾಡಿದೆ.ಜಾಗ ಮಂಜೂರಾಗಿ ವರ್ಷಗಳೇ ಉರುಳುತ್ತಿದ್ದರೂ ಅನುದಾನ ಬಿಡುಗಡೆ ವಿಳಂಬ ಕಾರಣ ಸ್ವಂತ ಕಟ್ಟಡ ತಲೆ ಎತ್ತಿಲ್ಲ.ಇದರೊಂದಿಗೆ ಮತ್ತೊಂದು ಸಮಸ್ಯೆ ಕಾಡುತ್ತಿದೆ.ಸ್ವಂತಕಟ್ಟಡಕ್ಕಾಗಿ ನೀಡಿದ ಜಾಗದಲ್ಲಿ ಡ್ರೈನೇಜ್ ನೀರು ಸಂಗ್ರಹವಾಗಿ ಕೆರೆಯಂತಾಗಿದೆ.ಗಿಡಗಂಟೆಗಳು ಸಮೃದ್ದವಾಗಿ ಬೆಳೆದು ಕಾಡಿನಂತೆ ಭಾಸವಾಗುತ್ತಿದೆ.ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದ ಹಿನ್ನಲೆ ಕೆರೆಯಂತಾಗಿದೆ.ಸ್ವಂತ ಕಟ್ಟಡ ನಿರ್ಮಿಸಲು ವಿಧ್ಯಾರ್ಥಿ ನಿಲಯದ ಉಸ್ತುವಾರಿಗಳು ಕಚೇರಿಗಳಿಗೆ ಅಲೆದಿದ್ದಾರೆ.ಕೊಳಚೆ ನೀರು ಮುಕ್ತವಾಗಲು ಕೋಟ್ಯಾಂತರ ಹಣ ಅವಶ್ಯಕತೆಯಿದೆ.ಅನುದನ ಬಿಡುಗಡೆ ಮಾಡದಿದ್ದಲ್ಲಿ ಸ್ಥಳ ಕೊಳಚೆಮುಕ್ತವಾಗಲು ಸಾಧ್ಯವಿಲ್ಲ.ಹತ್ತಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ವಿದ್ಯಾರ್ಥಿ ನಿಲಯಗಳು ಕಾಲ ದೂಡುತ್ತಿವೆ.ಮೂರು ವಿಧ್ಯಾರ್ಥಿನಿಲಯಗಳಿಂದ ಒಂದೂವರೆ ಲಕ್ಷ ಹಣ ಬಾಡಿಗೆ ನೀಡಲಾಗುತ್ತಿದೆ.ಸ್ವಂತ ಜಾಗವಿದ್ದರೂ ಸ್ವಂತ ಕಟ್ಟಡ ನಿರ್ಮಾಣ ಮರೀಚಿಕೆಯಾಗೇ ಉಳಿದಿದೆ.ವಿಧ್ಯಾರ್ಥಿಗಳ ನಿರ್ವಹಣೆಗೆ ತಗಲುವ ವೆಚ್ಚದಷ್ಟೇ ಬಾಡಿಗೆ ಹಣವೂ ಭರಿಸಬೇಕಾದ ಅನಿವಾರ್ಯ ಎದುರಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ನಂಜನಗೂಡು ತಾಲೂಕಿನವರೆ ಆಗಿದ್ದಾರೆ.ರಾಜ್ಯದ ಮುಖ್ಯಮಂತ್ರಿ ಕೂಡ ಮೈಸೂರು ಜಿಲ್ಲೆಯವರು ಆಗಿರುವ ಕಾರಣ ಡಿ ದೇವರಾಜ ಅರಸು ಹೆಸರಿನಲ್ಲಿ ನಡೆಯುತ್ತಿರುವ ಹಾಸ್ಟೆಲ್ ಪಟ್ಟಡಗಳ ಸೌಲಭ್ಯಕ್ಕೆ ಹಣ ಮಂಜೂರು ಮಾಡಬೇಕಾಗಿದೆ.ಅಭಿವೃದ್ದಿಯ ಮಂತ್ರ ಪಠಿಸುತ್ತಿರುವ ಜನಪ್ರತಿನಿಧಿಗಳು ಇನ್ನಾದರೂ ಇತ್ತ ತಿರುಗಿ ನೋಡುವರೇ…? ವಿಧ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ಭಾಗ್ಯ ಒದಗಿಸುವರೇ…?