ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ…ಇಬ್ಬರು ಸುಲಿಗೆಕೋರರ ಬಂಧನ…10 ಪ್ರಕರಣಗಳು ಪತ್ತೆ…
- Crime
- September 8, 2023
- No Comment
- 179
ಮೈಸೂರು,ಸೆ8,Tv10 ಕನ್ನಡ
ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಸುಲಿಗೆಕೋರರ ಬಂಧನವಾಗಿದೆ.ಬಂಧಿತರಿಂದ ಆಟೋ ಹಾಗೂ ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಬಂಧನದಿಂದ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 10 ಪ್ರಕರಣಗಳು ಪತ್ತೆಯಾಗಿದೆ.
ಕೆಂಪಿ ಸಿದ್ದನಹುಂಡಿ ಗ್ರಾಮದ ಉಮೇಶ್(23) ಹಾಗೂ ಮಂಚಳ್ಳಿಹುಂಡಿಯ ಶಿವಾನಂದ(21) ಬಂಧಿತರು.6 ಆರೋಪಿಗಳ ತಂಡ ಕೃತ್ಯವೆಸಗಿದ್ದು ಈ ಪೈಕಿ ಇಬ್ಬರನ್ನ ಬಂಧಿಸಲಾಗಿದೆ.ತಲೆ ಮರೆಸಿಕೊಂಡ ಉಳಿದ ನಾಲ್ವರ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ.ಆಟೋ ಬಾಡಿಗೆ ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕನಿಗೆ ಹಲ್ಲೆ ನಡೆಸಿ ಕದ್ದೊಯ್ತುತ್ತಿದ್ದ ತಂಡದ ಹೆಡೆಮುರಿಯನ್ನ ಗ್ರಾಮಾಂತರ ಠಾಣೆ ಪೊಲೀಸರು ಕಟ್ಟಿಹಾಕಿದ್ದಾರೆ.ಆರೋಪಿಗಳು 5 ಸುಲಿಗೆ,2 ದೇವಸ್ಥಾನ ಕಳುವು ಹಾಗೂ ಮೂರು ಬೈಕ್ ಗಳನ್ನ ಕಳುವು ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.ಬಿಳಿಗೆರೆ ಪೊಲೀಸ್ ಠಾಣೆಯ 1 ಪ್ರಕರಣ,ವರುಣ ಪೊಲೀಸ್ ಠಾಣೆಯ 2 ಪ್ರಕರಣ,ನಂಜನಗೂಡು ಗ್ರಾಮಾಂತರ ಠಾಣೆಯ 3 ಪ್ರಕರಣ,ಜಯಪುರ ಠಾಣೆಯ 1 ಪ್ರಕರಣ,ಹುಲ್ಲಹಳ್ಳಿ ಠಾಣೆಯ 1 ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ 2 ಪ್ರಕರಣಗಳನ್ನ ಭೇದಿಸಿದಂತಾಗಿದೆ
ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್,ಅಡಿಷನಲ್ ಎಸ್ಪಿ ನಂದಿನಿ,ಡಿವೈಎಸ್ಪಿ ಡಾ.ಸುಮಿತ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶೇಖರ್,ಪಿಎಸ್ಸೈ ಗಳಾದ ಚಂದ್ರ,ಬಸಪ್ಪ ಕೊರವಿ ಹಾಗೂ ಸಿಬ್ಬಂದಿಗಳಾದ ಮಹೇಶ್,ಪ್ರಸನ್ನ ಕುಮಾರ್,ಸುನಿಲ್ ಕುಮಾರ್,ಪವನ್ ಕುಮಾರ್,ವಿಶ್ವನಾಥ್,ಮಹಿಳಾ ಸಿಬ್ಬಂದಿ ಗೀತಾ,ಸಂಜಯ್ ಹಾಗೂ ಕೃಷ್ಣಮೂರ್ತಿ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…