
ಶಾಲೆಗೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಒತ್ತುವರಿ ತೆರುವು…
- TV10 Kannada Exclusive
- September 9, 2023
- No Comment
- 136

ಶಾಲೆಗೆ ಮೀಸಲಾದ ಜಾಗದಲ್ಲಿ ಅಕ್ರಮ ಕಟ್ಟಡ…ಒತ್ತುವರಿ ತೆರುವು…

ಮೈಸೂರು,ಸೆ8,Tv10 ಕನ್ನಡ


ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕಾಗಿ ಮಂಜೂರಾದ ಜಮೀನಿನಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳನ್ನ ಇಂದು ತೆರುವುಗೊಳಿಸಲಾಗಿದೆ.ಮೈಸೂರು ತಾಲೂಕು ಜಯಪುರ ಹೋಬಳಿ ಉದ್ಭೂರು ಗ್ರಾಮ ಸರ್ವೆ ನಂ.467 ರ 4 ಎಕ್ರೆ 32 ಗುಂಟೆ ಜಮೀನು ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕಾಗಿ ಮಂಜೂರು ಮಾಡಲಾಗಿದೆ.ಸದರಿ ಜಮೀನಿನ 30 ಗುಂಟೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗಿತ್ತು.ಸದರಿ ಆಸ್ತಿಯ ದಾಖಲೆಗಳನ್ನ ಪರಿಶೀಲನೆ ನಡೆಸಿದ ತಹಸೀಲ್ದಾರ್ ಗಿರೀಶ್ ರವರು ಅತಿಕ್ರಮಣವಾಗಿರುವುದನ್ನ ಖಚಿತಪಡಿಸಿಕೊಂಡು ಇಂದು ತೆರುವುಗೊಳಿಸಿದ್ದಾರೆ.ಶಾಲೆಗೆ ಸೇರಿದ ಆಸ್ತಿಯಲ್ಲಿ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳನ್ನ ತಾಲೂಕು ಆಡಳಿತ ತೆರುವುಗೊಳಿಸಿದೆ.ತಹಸೀಲ್ದಾರ್ ಗಿರೀಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.ಜಯಪುರ ಠಾಣೆ ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆದಿದೆ…
