
ಬಳ್ಳಿಗಳ ಕಾಟದಿಂದ ಮುಕ್ತವಾದ ಒಂಟಿಕೊಪ್ಪಲ್ ಬಡಾವಣೆ ಸ್ವಾಗತ ಕಮಾನು ಗೇಟ್…Tv10 ಕನ್ನಡ ಇಂಪ್ಯಾಕ್ಟ್…
- TV10 Kannada Exclusive
- September 10, 2023
- No Comment
- 143




ಮೈಸೂರು,ಸೆ10,Tv10 ಕನ್ನಡ
ಕೊನೆಗೂ ವಲಯ ಕಚೇರಿ 4 ರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ಬಳ್ಳಿಗಳಿಂದ ಆವರಸಿಕೊಂಡಿದ್ದ ಒಂಟಿಕೊಪ್ಪಲ್ ಬಡಾವಣೆ ಸ್ವಾಗತ ಕಮಾನು ಗೇಟ್ ಸ್ವಚ್ಛಗೊಳಿಸಿದ್ದಾರೆ.ಬಳ್ಳಿಗಳ ಕಾಟದಿಂದ ಕಮಾನು ಗೇಟ್ ಮುಕ್ತವಾಗಿದೆ.ಇದು Tv10 ಕನ್ನಡ ವಾಹಿನಿಯ ವರದಿಯ ಇಂಪ್ಯಾಕ್ಟ್ ಆಗಿದೆ.
ನಿನ್ನೆಯಷ್ಟೇ ಈ ಕುರಿತಂತೆ Tv10 ಕನ್ನಡ ವಾಹಿನಿ ವರದಿ ಮಾಡಿ ಎಚ್ಚರಿಸಿತ್ತು.ಕೆ.ಆರ್.ಎಸ್.ಮುಖ್ಯರಸ್ತೆಯ ಚಲುವಾಂಬ ಪಾರ್ಕ್ ಬಳಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಲಾಗಿದ್ದ ಒಂಟಿಕೊಪ್ಪಲ್ ಬಡಾವಣೆ ಕಮಾನು ಗೇಟ್ ನ್ನ ಬಳ್ಳಿಗಳು ಆವರಿಸಿಕೊಂಡಿತ್ತು.ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲವಾಗುವ ಹಂತ ತಲುಪಿತ್ತು.ಈ ಕುರಿತಂತೆ ವರದಿ ಮಾಡಿ ಎಚ್ಚರಿಸಲಾಗಿತ್ತು.ಕೂಡಲೇ ಎಚ್ಚೆತ್ತ ನಗರ ಪಾಲಿಕೆ ವಲಯ ಕಚೇರಿ 4 ರ ಅಧಿಕಾರಿಗಳು ಕಮಾನು ಗೇಟ್ ಗೆ ಬಳ್ಳಿಕಾಟದಿಂದ ಮುಕ್ತಿ ನೀಡಿದ್ದಾರೆ.ಇದು Tv10 ಕನ್ನಡ ವಾಹಿನಿ ವರದಿ ಫಲಶೃತಿಯಾಗಿದೆ…