
ಒಂಟಿಕೊಪ್ಪಲ್ ಸ್ವಾಗತ ಕಮಾನುಗೇಟ್ ಬಳ್ಳಿ ಕಾಟ…ಕಣ್ಮುಚ್ಚಿ ಕುಳಿತ ವಲಯ 4 ರ ಅಧಿಕಾರಿಗಳು…
- TV10 Kannada Exclusive
- September 9, 2023
- No Comment
- 180

ಮೈಸೂರು,ಸೆ9,Tv10 ಕನ್ನಡ
ಮೈಸೂರಿನ ಪ್ರತಿಷ್ಠಿತ ಬಡಾವಣೆ ಒಂಟಿಕೊಪ್ಪಲ್ ಗೆ ಸ್ವಾಗತ ಕೋರುವ ಕಮಾನು ಗೇಟ್ ಗೆ ಬಳ್ಳಿ ಕಾಟ ಶುರುವಾಗಿದೆ.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಲಕ್ಷಾಂತರ ಹಣ ಖರ್ಚುಮಾಡಿ ನಿರ್ಮಿಸಲಾದ ಕಮಾನುಗೇಟು ತುಕ್ಕು ಹಿಡಿಯತ್ತಿದೆ.ಜೊತೆಗೆ ಗೇಟ್ ನ ಅರ್ಧ ಭಾಗವನ್ನ ಗಿಡಬಳ್ಳಿಗಳು ಆವರಿಸಿಕೊಂಡಿದೆ.ವಲಯ 4 ರ ಕಚೇರಿಯ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಶೋಚನೀಯ.ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಕ್ಷರಗಳು ಬಣ್ಣ ಕಳೆದುಕೊಂಡಿ ನಿರ್ಜೀವ ಸ್ಥಿತಿ ತಲುಪಿದೆ.ಕೆ.ಆರ್.ಎಸ್ ಗೆ ತೆರಳುವ ಮುಖರಸ್ತೆಯ ಚಲುವಾಂಬ ಪಾರ್ಕ್ ಬಳಿ ನಿರ್ಮಿಸಲಾಗಿರುವ ಕಮಾನು ಗೇಟ್ ಗೆ ಕಾಯಕಲ್ಪ ಒದಗಿಸಬೇಕಿದೆ.ಬಳ್ಳಿಗಳು ಸಂಪೂರ್ಣ ಆವರಿಸಿ ಶಿಥಿಲಗೊಳ್ಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ನಿರ್ವಹಣೆ ಮಾಡಬೇಕಿದೆ…