
ನಿಯಂತ್ರಣ ತಪ್ಪಿ ಕಾರು ಪಲ್ಟಿ…ಇಬ್ಬರಿಗೆ ಗಂಭೀರ ಗಾಯ…
- Crime
- September 12, 2023
- No Comment
- 129

ನಿಯಂತ್ರಣ ತಪ್ಪಿ ಕಾರು ಪಲ್ಟಿ…ಇಬ್ಬರಿಗೆ ಗಂಭೀರ ಗಾಯ…

ಮೈಸೂರು,ಸೆ12,Tv10ಕನ್ನಡ
ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಹಿನ್ನಲೆ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಮೈಸೂರಿನ ಬೋಗಾದಿ ಬಳಿ ನಡೆದಿದೆ.
ಸಕಾಲಕ್ಕೆ ಸ್ಥಳಕ್ಕೆ ಧಾವಿಸಿದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.ಘಟನೆಯಲ್ಲಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.
ಮೂರು ವಿದ್ಯುತ್ ಕಂಬಗಳು ಜಖಂ ಆಗಿದೆ.108 ಆ್ಯಂಬುಲೆನ್ಸ್‌ನ ಧರಣೇಶ್ ಹಾಗೂ ಚಾಲಕ ಸುರೇಂದ್ರನಾಥ್ ಧಾವಿಸಿ ಗಾಯಗೊಂಡವರ ನೆರವಿಗೆ ಬಂದಿದ್ದಾರೆ.
ಈ ವೇಳೆ ಕಾರಿನಲ್ಲಿ ಸಿಲುಕಿದ್ದ ರಾಘವನ್ ಹಾಗೂ ನಿಶ್ಚಲ್ ಸಾಯಿ
ರವರನ್ನ ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…