ಅಪ್ರಾಪ್ತಳನ್ನ ಮದುವೆಯಾದ ಗ್ರಾ.ಪಂ.ಅಧ್ಯಕ್ಷ…ಆಧಾರ್ ಕಾರ್ಡ್ ತಿದ್ದುಪಡಿ ಆರೋಪ…ಗ್ರಾಮಸ್ಥರಿಂದಲೇ ದೂರು…

ಅಪ್ರಾಪ್ತಳನ್ನ ಮದುವೆಯಾದ ಗ್ರಾ.ಪಂ.ಅಧ್ಯಕ್ಷ…ಆಧಾರ್ ಕಾರ್ಡ್ ತಿದ್ದುಪಡಿ ಆರೋಪ…ಗ್ರಾಮಸ್ಥರಿಂದಲೇ ದೂರು…

  • Crime
  • September 12, 2023
  • No Comment
  • 245

ನಂಜನಗೂಡು,ಸೆ12,Tv10 ಕನ್ನಡ

ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಪ್ರಾಪ್ತಳನ್ನ ವಿವಾಹವಾದ ಆರೋಪ ನಂಜನಗೂಡು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಶಾಲಾ ದಾಖಲಾತಿಗಳನ್ನ ಒದಗಿಸಿದ ಗ್ರಾಮಸ್ಥರು ಅಪ್ರಾಪ್ತಳನ್ನ ವಿವಾಹವಾದ ಗ್ರಾಮ ಪಂಚಾಯ್ತಿ ಅಧ್ಯಕ್ಷನ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.ಹಾಡ್ಯ ಗ್ರಾಮ ಪಂಚಾಯ್ತು ಅಧ್ಯಕ್ಷ ಹರೀಶ್ ಕುಮಾರ್ ಮೇಲೆ ಇಂತಹ ಆರೋಪ ಕೇಳಿ ಬಂದಿದೆ.ಫೆಬ್ರವರಿ 2023 ರಲ್ಲಿ ಅರಿಯೂರು ಗ್ರಾಮದ ಅಪ್ರಾಪ್ತ ಬಾಲಕಿಯ ಜೊತೆ ನಂಜನಗೂಡಿನ ಕಲ್ಯಾಣಮಂಟಪದಲ್ಲಿ ಅದ್ದೂರಿ ವಿವಾಹ ನಡೆದಿತ್ತು.ಶಾಲಾ ದಾಖಲಾತಿಗಳ ಪ್ರಕಾರ ಮಧುಮಗಳು ಇನ್ನೂ ಅಪ್ರಾಪ್ತೆ.ಆದರೆ ಆಧಾರ್ ಕಾರ್ಡ್ ನಲ್ಲಿ ವಯಸ್ಸನ್ನ ತಿದ್ದುಪಡಿ ಮಾಡಿ ವಯಸ್ಕಳಂತೆ ತಿದ್ದುಪಡಿ ಮಾಡಿದ್ದಾರೆಂದು ಅರಿಯೂರು ಗ್ರಾಮಸ್ಥರೇ ದೂರು ನೀಡಿದ್ದಾರೆ.ಶಾಲಾ ದಾಖಲಾತಿಗಳನ್ನ ಒದಗಿಸಿರುವ ಗ್ರಾಮಸ್ಥರು ಹರೀಶ್ ಕುಮಾರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ…

Spread the love

Related post

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…
ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್…400 ಕ್ಕೂ ಹೆಚ್ಚು ಪ್ರಕರಣ ದಾಖಲು…

ಮೈಸೂರು ಪೊಲೀಸ್ ಅಲರ್ಟ್…ರೌಡಿ ಪ್ರತಿಬಂಧಕ ದಳದಿಂದ ವಿಶೇಷ ಕಾರ್ಯಾಚರಣೆ…ಕಾನೂನು ಬಾಹಿರ ಚಟುವಟಿಕೆಗೆ…

ಮೈಸೂರು,ಅ12,Tv10 ಕನ್ನಡ ಇತ್ತೀಚೆಗೆ ನಡೆದ ಭೀಕರ ಕೊಲೆ ರೇಪ್ ಅಂಡ್ ಮರ್ಡರ್ ಮೈಸೂರು ಪೊಲೀಸರ ಕಾರ್ಯಚಟುವಟಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ.ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸ್ ಪಡೆ ಸನ್ನದ್ದಾಗಿ…

Leave a Reply

Your email address will not be published. Required fields are marked *