ದಸರಾ ಹಿನ್ನಲೆ…ಪ್ರಥಮ ಪ್ರಜೆಯಿಂದ ರಾಜಮಾರ್ಗ ಪರಿಶೀಲನೆ…ನಗರ ಸೌಂದರ್ಯ ಹೆಚ್ಚಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ…
- TV10 Kannada Exclusive
- September 12, 2023
- No Comment
- 143

ದಸರಾ ಹಿನ್ನಲೆ…ಪ್ರಥಮ ಪ್ರಜೆಯಿಂದ ರಾಜಮಾರ್ಗ ಪರಿಶೀಲನೆ…ನಗರ ಸೌಂದರ್ಯ ಹೆಚ್ಚಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ…

ಮೈಸೂರು,ಸೆ12,Tv10 ಕನ್ನಡ

ವಿಶ್ವವಿಖ್ಯಾತ ದಸರಾ 2023 ಕ್ಕೆ ದಿನಗಣನೆ ಆರಂಭವಾಗಿದೆ.ಈಗಾಗಲೇ ದಸರಾ ಅಟ್ರಾಕ್ಷನ್ ಗಜಪಡೆ ಸಾಂಸ್ಕೃತಿಕ ನಗರಿ ಪ್ರವೇಶಿಸಿದೆ.ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ತಾಲೀಮು ನಡೆಸುತ್ತಾ ಮೈಸೂರಿಗರಲ್ಲಿ ಕುತೂಹಲ ತಂದಿದೆ.ಲಕ್ಷಾಂತರ ಪ್ರವಾಸಿಗರ ಕೇಂದ್ರಬಿಂದುವಾದ ಜಂಬೂಸವಾರಿ ತೆರಳುವ ರಾಜಮಾರ್ಗವೂ ಅಚ್ಚುಕಟ್ಟಾಗಿರಬೇಕೆಂಬುದು ಮೈಸೂರು ಮಹಾನಗರ ಪಾಲಿಕೆಯ ಅಭಿಪ್ರಾಯ.ಈ ಹಿನ್ನಲೆ ಇಂದು ಮೇಯರ್ ಶಿವಕುಮಾರ್ ಜಂಬೂಸವಾರಿ ತೆರಳುವ ರಾಜಮಾರ್ಗ ಸೇರಿದಂತೆ ಅರಮನೆಯ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಗರದ ಅಂದ ಹೆಚ್ಚುಸುವ ಕುರಿತಂತೆ ಮೇಯರ್ ಶಿವಕುಮಾರ್ ಒತ್ತು ನೀಡಿದ್ದಾರೆ.ಕೆ.ಆರ್.ವೃತ್ತ,ಚಾಮರಾಜ ವೃತ್ತಕ್ಕೆ ದೀಪಾಲಂಕಾರ,ವೃತ್ತದ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ರಾಜಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಿರುವ ಟೈಲ್ಸ್ ಗಳ ಪರಿಶೀಲನೆ ನಡೆಸಿದ್ದು ಮುರಿದ ಟೈಲ್ಸ್ ಗಳನ್ನ ಬದಲಾಯಿಸುವಂತೆ ಸೂಚನೆ ನೀಡಿದ್ದಾರೆ.ಡ್ಯಾಮೇಜ್ ಆಗಿರುವ ಬ್ಯಾರಿಕೇಡ್ ಗಳನ್ನ ಬದಲಾಯಿಸುವುದು,ಮುಚ್ಚಿರುವ ಸಬ್ ವೇ ತೆರುವುಗೊಳಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.ಟೌನ್ ಹಾಲ್ ನಲ್ಲಿ ನೆನೆಗುದಿಗೆ ಬಿದ್ದ ಪಾರ್ಕಿಂಗ್ ವ್ಯವಸ್ಥೆಯನ್ನೂ ಪರಿಶೀಲಿಸಿ ಶೀಘ್ರದಲ್ಲಿ ಚಾಲ್ತಿಗೆ ಬರುವ ಕುರಿತಂತೆ ಚರ್ಚಿಸಿದ್ದಾರೆ.ಒಟ್ಟಾರೆ ದಸರಾ ಸಮಯದಲ್ಲಿ ಬರುವ ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾಣುವಂತೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ…