ULC ಜಮೀನು ಒತ್ತುವರಿದಾರರ ವಿರುದ್ದ ಜಿಲ್ಲಾಧಿಕಾರಿ ಸಮರ…20 ಕೋಟಿ ಮೌಲ್ಯದ ಆಸ್ತಿ ವಶಕ್ಕೆ…ಡಾ.ಕೆ.ವಿ.ರಾಜೇಂದ್ರ ಸುಗ್ರೀವಾಜ್ಞೆ ಪಾಲಿಸಿದ ಎಸಿ ಮತ್ತು ತಹಸೀಲ್ದಾರ್…

ULC ಜಮೀನು ಒತ್ತುವರಿದಾರರ ವಿರುದ್ದ ಜಿಲ್ಲಾಧಿಕಾರಿ ಸಮರ…20 ಕೋಟಿ ಮೌಲ್ಯದ ಆಸ್ತಿ ವಶಕ್ಕೆ…ಡಾ.ಕೆ.ವಿ.ರಾಜೇಂದ್ರ ಸುಗ್ರೀವಾಜ್ಞೆ ಪಾಲಿಸಿದ ಎಸಿ ಮತ್ತು ತಹಸೀಲ್ದಾರ್…

ULC ಜಮೀನು ಒತ್ತುವರಿದಾರರ ವಿರುದ್ದ ಜಿಲ್ಲಾಧಿಕಾರಿ ಸಮರ…20 ಕೋಟಿ ಮೌಲ್ಯದ ಆಸ್ತಿ ವಶಕ್ಕೆ…ಡಾ.ಕೆ.ವಿ.ರಾಜೇಂದ್ರ ಸುಗ್ರೀವಾಜ್ಞೆ ಪಾಲಿಸಿದ ಎಸಿ ಮತ್ತು ತಹಸೀಲ್ದಾರ್…

ಮೈಸೂರು,ಸೆ12,Tv10 ಕನ್ನಡ

ULC ಜಮೀನು ಒತ್ತುವರಿದಾರರಿಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಡುಕ ಹುಟ್ಟಿಸಿದ್ದಾರೆ.GRS ಫ್ಯಾಂಟಸಿ ಪಾರ್ಕ್ ಬಳಿ ಒತ್ತುವರಿಯಾಗಿದ್ದ 20 ಕೋಟಿ ಮೌಲ್ಯದ ULC ಜಮೀನು ವಶಪಡಿಸಿಕೊಳ್ಳುವ ಮೂಲಕ ಛಳಿ ಬಿಡಿಸಿದ್ದಾರೆ.ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ULC ಜಮೀನುಗಳನ್ನ ವಶಪಡಿಸಿಕೊಳ್ಳುವುದಾಗಿ ಭೂಕಬಳಿಕೆದಾರರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ

ಮೈಸೂರು ನಗರ ಕಸಬಾ ಹೋಬಳಿ ಮೇಟಗಳ್ಳಿ ಗ್ರಾಮದ ಸರ್ವೆ ನಂ 62/3 ರಲ್ಲಿರುವ ಸುಮಾರು ಒಂದು ಎಕ್ರೆ ULC ಜಮೀನನ್ನ ವಶಪಡಿಸಿಕೊಳ್ಳಲಾಗಿದೆ.ಸದರಿ ಜಮೀನು 20 ಕೋಟಿ ಬೆಲೆ ಬಾಳುವುದೆಂದು ಅಂದಾಜಿಸಲಾಗಿದೆ.ಜಿಲ್ಲಾಧಿಕಾರಿಗಳು ಹೊರಡಿಸಿದ ಸುಗ್ರೀವಾಜ್ಞೆಯನ್ನ ಪಾಲಿಸಿದ ಉಪವಿಭಾಗಾಧಿಕಾರಿ ರಕ್ಷಿತ್ ಹಾಗೂ ತಹಸೀಲ್ದಾರ್ ಗಿರೀಶ್ ರವರು ಇಂದು ಒತ್ತುವರಿಯಾಗಿದ್ದ ULC ಜಮೀನು ವಶಪಡಿಸಿಕೊಂಡರು.ಮೇಟಗಳ್ಳಿ ಗ್ರಾಮದ ಸರ್ವೆ ನಂ68/1,68/3,69,64/2 ಹಾಗೂ 62/3 ಜಮೀನುಗಳನ್ನ ULC ಕಾಯ್ದೆ 11/84/76-77 ಅನ್ವಯದಂತೆ ಗೋವಿಂದೇಗೌಡ,ತಿಮ್ಮೇಗೌಡ,ಯಾಲಕ್ಕಿಗೌಡ,ನಾರಾಯಣ,ಜಯರಾಮು,ಪಾಪಣ್ಣ ರವರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.ಸದರಿ ಸರ್ವೆ ನಂ ಪೈಕಿ 62/3 ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನ ನಿರ್ಮಿಸಿ ಎಮ್.ಸ್ಯಾಂಡ್ ಮರಳು,ಜೆಲ್ಲಿ,ಇಟ್ಟಿಗೆಗಳ ವಹಿವಾಟು ನಡೆಯುತ್ತಿತ್ತು.ಈ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ದಾಖಲೆಗಳನ್ನ ಪರಿಶೀಲಿಸಿ ಕೂಡಲೇ ಒತ್ತುವರಿಯನ್ನ ತೆರುವುಗೊಳಿಸಿ ವಶಕ್ಕೆ ಪಡೆಯುವಂತೆ

ಉಪವಿಭಾಗಾಧಿಕಾರಿಗಳಾದ ಕೆ.ಆರ್.ರಕ್ಷಿತ್ ಹಾಗೂ ತಹಸೀಲ್ದಾರ್ ಬಿ.ಎನ್.ಗಿರೀಶ್ ರವರಿಗೆ ಸುಗ್ರೀವಾಜ್ಞೆ ಹೊರಡಿಸಿದ್ದರು.ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎಸಿ ಹಾಗೂ ತಹಸೀಲ್ದಾರ್ ರವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ KLR ಕಾಯ್ದೆ 192(A) ಪ್ರಕಾರ ಮೊಕದ್ದಮೆ ದಾಖಲಿಸುವಂತೆ ದೂರು ನೀಡಿ ನಂತರ ಇಂದು ಒತ್ತುವರಿ ತೆರುವುಗೊಳಿಸಿದ್ದಾರೆ.ಮೇಟಗಳ್ಳಿ ಠಾಣೆ ಪೊಲೀಸರ ಭದ್ರತೆಯೊಂದಿಗೆ ಇಂದು ಸುಮಾರು 20 ಕೋಟಿ ಮೌಲ್ಯದ ULC ಜಮೀನು ವಶಪಡಿಸಿಕೊಳ್ಳಲಾಗಿದೆ.ಒತ್ತುವರಿ ತೆರುವು ಕಾರ್ಯಾಚರಣೆಯಲ್ಲಿ ಆರ್.ಐ.ರಾಘವೇಂದ್ರ ನಾಯಕ್,ಗ್ರಾಮ ಆಡಳಿತ.

ಅಧಿಕಾರಿ ಮಹೇಶ್ ಹಾಗೂಸಿಟಿ ಸರ್ವೆ ಭೂಮಾಪಕರಾದ ಸುರೇಶ್ . ಗ್ರಾಮ ಆಡಳಿತ ಆಡಳಿತ ಅಧಿಕಾರಿಗಳಾದ ನಾಗೇಶ್ ಕುಮಾರ್ . ಗಿರೀಶ್ ಹಾಗೂ ಭಾಸ್ಕರ್ ಹೋಬಳಿಯ ಎಲ್ಲಾ ಗ್ರಾಮ ಸಹಾಯಕರು ಹಾಜರಿದ್ದರು ಇತರರು ಸಾಥ್ ನೀಡಿದ್ದಾರೆ.

ಇನ್ಮುಂದೆ ULC ಜಮೀನು ಒತ್ತುವರಿ ಮಾಡುವ ಭೂಕಬಳಿಕೆದಾರರಿಗೆ ಜಿಲ್ಲಾಧಿಕಾರಿಗಳು ಈ ಕಾರ್ಯಾಚರಣೆ ಮೂಲಕ ಎಚ್ಚರಿಕೆ ಗಂಟೆ ನೀಡಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *