ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಪ್ರಕರಣ…ಮೃತನ ಕುಟುಂಬಕ್ಕರ ಒಂದು ಲಕ್ಷ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಶಾಸಕ ಶ್ರೀವತ್ಸ…

ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಪ್ರಕರಣ…ಮೃತನ ಕುಟುಂಬಕ್ಕರ ಒಂದು ಲಕ್ಷ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಶಾಸಕ ಶ್ರೀವತ್ಸ…

ಮೈಸೂರು,ಸೆ23,Tv10 ಕನ್ನಡ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಕೃಷ್ಣ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಮೂಲಕ ಶಾಸಕ ಟಿ.ಎಸ್.ಶ್ರೀವತ್ಸ ರವರು ಮಾನವೀಯತೆ ಮೆರೆದಿದ್ದಾರೆ. ಜೆ.ಪಿ‌.ನಗರದ ಹೆಸರಾಂತ ವಿದ್ಯಾಸಂಸ್ಥೆ ಯಲ್ಲಿ ವಿಧ್ಯಾರ್ಥಿ ಕೃಷ್ಣ ಕಾಲೇಜಿನ ಲ್ಯಾಬ್ ನಲ್ಲಿ ನಡೆದ ಅಚಾತುರ್ಯದಿಂದ ಸ್ನೇಹಿತನಿಂದಲೇ ಹಲ್ಲೆಗೊಳಗಾಗಿ ಸೆ.18 ರಂದು ಆಸ್ಪತ್ರೆಗೆ ದಾಖಲಾಗಿದ್ದ.ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಕೃಷ್ಣ ಕೊನೆ ಉಸಿರೆಳೆದಿದ್ದ. ಬಡತನದ ನಡುವೆ ಓದಿನ ಮಧ್ಯೆ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದ ಕೃಷ್ಣ. ತಂದೆ ಸತೀಶ ಬೀದಿ ಬೀದಿಗಳಲ್ಲಿ ಬಟ್ಟೆ ವ್ಯಾಪಾರಿ.ತಾಯಿ ರೇಖಾ ಮನೆ ಕೆಲಸ,ಅಣ್ಣ ಅಭಿಷೇಕ್ ಸೋಮಾನಿ ಕಾಲೇಜು ಬಿ.ಎ‌.ವಿದ್ಯಾರ್ಥಿ. ಜೆ.ಪಿ.ನಗರ ಬಾಗದ ಮಹದೇವ ಪುರ ಮೊದಲನೇ ಕ್ರಾಸ್, ಸಿ.ಬ್ಲಾಕ್ ನ ಪುಟ್ಟ ಬಾಡಿಗೆ ಮನೆಯ ಜೀವನ.ಇಂತಹ ಕುಟುಂಬಕ್ಕೆ ಬಂದು ತಟ್ಟಿದ ಸಾವು,ವಿಧಿಯ ಅಟಕ್ಕೆ ಕುಟುಂಬ ತತ್ತರವಾಯಿತು.ಆದಿನ ಶವವನ್ನು ಶಾಲೆಯ ಬಳಿ ತಂದು ಸಂಸ್ಥೆಯ ವಿರುದ್ದ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಆ ಭಾಗದ ,24 ಮನೆ ತೆಲಗು ಶೆಟ್ಟಿಯವರ ಕಾರ್ಯಕರ್ತ ತಕ್ಷಣವೇ ಶಾಸಕರಿಗೆ ಕರೆ ಮಾಡಿ ಸಾವಿನ ಮನೆ ನ್ಯಾಯ ಕೊಡಿಸಿ,ಸಾವಿನ ಕುಟುಂಬಕ್ಕೆ ನಿಮ್ಮಿಂದ ಸಾಂತ್ವನ ಬೇಕು ಎಂದು ಕೇಳಿದ ತಕ್ಷಣವೇ ಸ್ಥಳಕ್ಕೆ ಬಂದ ಶ್ರೀ ವತ್ಸ ರವರು ಅವರ ಕುಟುಂಬದವರೊಡನೆ ಮಾತನಾಡಿ ಅವರ ಕಷ್ಟವನ್ನು ಅರಿತು ತಕ್ಷಣವೇ ಸಂಸ್ಥೆಯ ಪ್ರಾಂಶುಪಾಲರು,ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರೊಡನೆ ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು,ಕುಟುಂಬದವರು,ಹಾಗೂ ಸ್ಥಳೀಯ ಸಮಾಜದ ಮುಖಂಡರೊಂದಿಗೆ ಸುಧೀರ್ಘ ವಾಗಿ ಚರ್ಚಿಸಿ ಅವರ ಕುಟುಂಬದ ಆಧಾರ ಸ್ಥಂಭ ವಾದ ಮೊದಲನೆಯ ಮಗ ಅಭಿಷೇಕ ನಿಗೆ ಜೆ.ಎಸ್. ಎಸ್. ಸಂಸ್ಥೆಯಲ್ಲಿ ಡಿ.ಗ್ರೂಪ್ ನೌಕರಿ ಕೊಡಿಸಿ ಅತನ ವಿದ್ಯಾಭ್ಯಾಸ ಕ್ಕೆ ಸಹಾಯ ಮಾಡುವ ಕುರಿತಂತರ ಸಂಸ್ಥೆ ಯ ಹಿರಿಯರ ಅಧಿಕಾರಿಗಳನ್ನು ಒಪ್ಪಿಸಲಾಗಿತ್ತು.ಘಟನೆಗೆ ಮರುಗಿದ ಶಾಸಕ ಶ್ರೀವತ್ಸ ಸ್ಥಳದಲ್ಲಿಯೇ ತಮ್ಮ ಸಂಬಳದ ಸ್ವಂತ ಹಣದಲ್ಲಿ ಒಂದು ಲಕ್ಷ ರೂ ಗಳ ಪರಿಹಾರ ಹಾಗೂ ಕೆ.ಅರ್.ಕ್ಷೇತ್ರದ ವ್ಯಾಪ್ತಿಯಲ್ಲಿ ಅಶ್ರಯಮನೆಗೆ ಸ್ವಂತ ಹಣಕಟ್ಟಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆ ಇಂದು ಮೃತನ ತಂದೆ ಸತೀಶ್ ರವರ ಹೆಸರಿಗೆ ಚೆಕ್ ಹಸ್ತಾತರಿಸಲಾಯಿತು…

ಈ ಸಂಧರ್ಭದಲ್ಲಿ ಪೂಜ್ಯ ಮಹಾ ಪೌರರಾದ ಶಿವಕುಮಾರ್, ಉಪ ಮೇಯರ್ ಡಾ.ರೂಪ, ಅಡಳಿತ ಪಕ್ಷದ ನಾಯಕ ಮಾ.ವಿ.ರಾಮ ಪ್ರಸಾದ್,ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಳ ಸೋಮಶೇಖರ್, ನಗರ ಮಾಧ್ಯಮ ವಕ್ತಾರರಾದ ಮಾ.ಮೋಹನ್, ಸೋಮ ಸುಂದರ್, ವಾಣೀಶ್ ಕುಮಾರ್,ಪ್ರದೀಪ್, ಕಿಶೋರ್ ಹಾಜರಿದ್ದರು…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *