ಸರ್ಕಾರಿ ಹಾಗೂ ಪಿಟಿಸಿಎಲ್ ಜಮೀನುಗಳನ್ನ ಗುರುತಿಸಿ ಭೂಮಿ ತತ್ರಾಂಶದಲ್ಲಿ ದಾಖಲಿಸಲು ಅಂತಿಮ ಗಡುವು…ಸರ್ಕಾರದಿಂದಮಹತ್ವದ ಆದೇಶ…
- TV10 Kannada Exclusive
- October 2, 2023
- No Comment
- 549
ಮೈಸೂರು,ಅ2,Tv10 ಕನ್ನಡ
ಸರ್ಕಾರಿ ಜಮೀನು ಹಾಗೂ ಪಿಟಿಸಿಎಲ್ ಜಮೀನುಗಳ ರಕ್ಷಣೆಗೆ ಸರ್ಕಾರ ಸಜ್ಜಾಗಿದೆ.ಅಕ್ರಮವಾಗಿ ಭೂವರ್ತನೆ ಮಾಡಿಕೊಳ್ಳುವುದು,ಖರಾಬು ಹಾಗೂ ಗೋಮಾಳ ಜಮೀನುಗಳನ್ನ ಕಬಳಿಸುವವರ ವಿರುದ್ದ ಸರ್ಕಾರ ಸಮರ ಸಾರಿದೆ.ಸರ್ಕಾರದ ಹಿತಾಸಕ್ತಿ ಒಳಗೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಜಮೀನುಗಳು ಹಾಗೂ ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳು,ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿ ಅಧಿಸೂಚನೆ ಹೊರಡಿಸಿರುವಂತಹ ಜಮೀನುಗಳನ್ನ ಗುರುತಿಸಿ ಪಟ್ಟಿಮಾಡಿ ಭೂಮಿ ತತ್ರಾಂಶದಲ್ಲಿ ಪಹಣಿಗಳನ್ನ ಫ್ಲಾಗ್ ಮಾಡಲು ಸೆಪ್ಟೆಂಬರ್ 30 ಕ್ಕೆ ನಿಗದಿ ಪಡಿಸಲಾಗಿತ್ತು.ಇದುವರೆಗೆ ಈ ಕಾರ್ಯ ಪೂರ್ಣಗೊಳ್ಳದ ಹಿನ್ನಲೆ ಕಂದಾಯ ಆಯುಕ್ತಾಲಯವು ಗಡುವನ್ನ ವಿಸ್ತರಿಸಿದೆ.ಅಕ್ಟೋಬರ್ 16,2023 ರ ಒಳಗೆ ತತ್ರಾಂಶದಲ್ಲಿ ದಾಖಲಿಸಿ ಫ್ಲಾಗ್ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.ಹಾಗೊಂದು ವೇಳೆ ಫ್ಲಾಗ್ ಮಾಡುವ ಕೆಲಸವನ್ನ ಬಾಕಿ ಉಳಿಸಿದ್ದಲ್ಲಿ ಆಯಾ ತಹಸೀಲ್ದಾರ್ ಗಳನ್ಮ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಖಡಕ್ ಸೂಚನೆ ನೀಡಲಾಗಿದೆ…