ದಸರಾ ಯುವ ಸಂಭ್ರಮ… ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರಿಂದ ಚಾಲನೆ…
- TV10 Kannada Exclusive
- October 6, 2023
- No Comment
- 177

ಮೈಸೂರು,ಅ6,Tv10 ಕನ್ನಡ

ಯುವಜನತೆಯ ಪ್ರತಿಭೆ ಅನಾವರಣಗೊಳಿಸುವ ಯುವಸಂಭ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು ಚಾಲನೆ ನೀಡಿದರು.ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನಲೆ
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಯುವ ಸಂಭ್ರಮಕ್ಕೆ ಅದ್ದೂರಿಯಿಂದ ಚಾಲನೆ ದೊರೆಯಿತು. ಗಣ್ಯರು ಹಾಗೂ ಅತಿಥಿಗಳು ನಗಾರಿ, ಕಂಸಾಳೆ, ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವ ಡಾ.ಹೆಚ್.ಸು.ಮಹದೇವಪ್ಪ ಭಾರತೀಯರಾದ ನಾವೆಲ್ಲರೂ ಒಂದೆ. ಎಲ್ಲಾ ಧರ್ಮಗಳ ಆಚಾರ, ವಿಚಾರಗಳು ಇಲ್ಲಿ ಮುಕ್ತವಾಗಿವೆ. ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ಹಾಗೂ ನಮಗೆ ನಾವೇ ಅರ್ಪಿಸಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಜಾರಿಮಾಡುವ ಮೂಲಕ ಎಲ್ಲರ ಭವಿಷ್ಯ ಮತ್ತು ಹಕ್ಕನ್ನು ರಕ್ಷಣೆ ಮಾಡುವಲ್ಲಿ ಈ ವೇದಿಕೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಯುವ ಜನರು ದೇಶ ಕಟ್ಟುವ ಕಾಯದಲ್ಲಿ ತೊಡಗಬೇಕು. ಈ ಯುವ ಸಂಭ್ರಮ ವೇದಿಕೆಯಲ್ಲಿ ಅನೇಕ ಸಂಗೀತ, ವಿವಿಧ ನೃತ್ಯವನ್ನು ಸವಿಯುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ, ಜವಾಬ್ದಾರಿಯುತ ಪ್ರಜೆಗಳಾಗಬೇಕು. ನಮ್ಮ ರಾಷ್ಟ್ರೀಯ ಭಾವೈಕ್ಯತೆ, ಬಹುತ್ವವನ್ನು ರಕ್ಷಣೆ ಮಾಡುವಂತಾಗಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾರಾದಂಪತಿ ವಸಿಷ್ಠಸಿಂಹ ಮತ್ತು ಹರಿಪ್ರಿಯಾ ಆಗಮಿಸಿ ಮಾತನಾಡಿದರು. ಶಾಸಕರಾದ ಕೆ.ಹರೀಶ್‌ಗೌಡ, ರವಿಶಂಕರ್, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕಾರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ವಿ.ಆರ್.ಶೈಲಜಾ, ಯವ ಸಂಭ್ರಮ ಉಪಸಮಿತಿ ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ನಿಂಗರಾಜು, ಡಿಸಿಪಿ ಮುತ್ತುರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.