ಜೆಸಿ ಕಾಲೇಜು ಹಾಸ್ಟೆಲ್ ನಲ್ಲಿ ಹುಳುಮಿಶ್ರಿತ ಆಹಾರ…ವಿಧ್ಯಾರ್ಥಿಗಳಿಂದ ಧಿಢೀರ್ ಪ್ರತಿಭಟನೆ…
- TV10 Kannada Exclusive
- October 6, 2023
- No Comment
- 228

ಮೈಸೂರು,ಅ6,Tv10 ಕನ್ನಡ
ಹುಳುಮಿಶ್ರಿತ ಆಹಾರ ನೀಡಿದ ಹಿನ್ನಲೆ ಮೈಸೂರಿನ ಜೆ ಸಿ ಕಾಲೇಜು ವಿದ್ಯಾರ್ಥಿಗಳು ನಿನ್ನೆ ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.
ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಜೆ ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ.ವಾರ್ಡನ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿ
ಊಟ ಬಿಟ್ಟು ಬೀದಿಗಿಳಿದ ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟಿಸಿದರು.
ಪ್ರತಿ ಬಾರಿ ಇದೇ ರೀತಿ ಆಹಾರ ನೀಡುತ್ತಾರೆ.
ವಾರ್ಡನ್ ಹಾಸ್ಟೆಲ್‌ನಲ್ಲಿ ಇರುವುದೇ ಇಲ್ಲ.
ಇದರಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ.
ಹಾಸ್ಟೆಲ್ ವಾರ್ಡನ್ ವಿರುದ್ದ ಕ್ರಮ ಕೈಗೊಳ್ಳಿ
ಎಂದು ನೂರಾರು ವಿದ್ಯಾರ್ಥಿಗಳು ಒತ್ತಾಯಿಸಿದರು…