ವಿರೋಧದ ನಡುವೆ ಮಹಿಷ ದಸರಾಗೆ ಸಿದ್ದತೆ…ಆಹ್ವಾನ ಪತ್ರಿಕೆ ಬಿಡುಗಡೆ…
- TV10 Kannada Exclusive
- October 7, 2023
- No Comment
- 266

ಮೈಸೂರು,ಅ7,Tv10 ಕನ್ನಡ
ಭಾರಿ ವಿರೋಧದ ನಡುವೆಯೂ ಮಹಿಷ ದಸರಾದ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದೆ.
ಮಹಿಷಾಸುರನ ಭಾವಚಿತ್ರವಿರುವ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗಿದೆ.
50ನೇ ವರ್ಷದ ದಸರಾ ಎಂಬ ಹೆಡ್ ಲೈನ್ ನಲ್ಲಿ ಮುದ್ರಿತವಾಗಿದರ.
ಅ 13ರಂದು ಮಹಿಷ ದಸರಾ ಆಚರಣೆ ಮಾಡಲಾಗುತ್ತದೆ.
ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಮುದ್ರಿಸಲಾಗಿದೆ.
13/10/2023ರ ಕಾರ್ಯಕ್ರಮದ ವಿವರವನ್ನೂ ಪ್ರಕಟಿಸಲಾಗಿದೆ.
ಬೆಳಗ್ಗೆ 8ಕ್ಕೆ ತಾವರೆಕಟ್ಟೆ ಬಳಿ ಎಲ್ಲರೂ ಸೇರುವುದು.
ಬೆ 8.30ಕ್ಕೆ ಅತಿಥಿ ಗಣ್ಯರೊಡನೆ ಆದಿ ದ್ರಾವಿಡ ದೊರೆ ಮಹಿಷಾಸುರ ಮೂರ್ತಿಗೆ ಪುಷ್ಪನಮನ ಅರ್ಪಿಸುವುದು.
ಬೆ 9.30ಕ್ಕೆ ತಾವರೆಕಟ್ಟೆಯಿಂದ ಪುರಭವನಕ್ಕೆ ಬೈಕ್ ರಾಲಿ.ಜಾನಪದ ಸಂಗೀತ ಮೇಳ, ಟ್ಯಾಬ್ಲೋಗಳ ಮೆರವಣಿಗೆ ಆಯೋಜಿಸಲಾಗಿದೆ.
11.00ಕ್ಕೆ ಪುರಭವನದ ಮಹಿಷಾಸುರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಹಿಷ ದಸರ ಉದ್ಘಾಟನೆ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮಾಡಲಿದ್ದಾರೆ.
ಮುಖ್ಯ ಅತಿಥಿಗಳು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ಬೌದ್ದ ಬಿಕ್ಕು ಬೋಧಿದತ್ತ ಭಂತೇಜಿ ಸೇರಿ ಹಲವರು ಭಾಗಿಯಾಗಲಿದ್ದಾರೆ…