ಪೊಲೀಸ್ ಇಲಾಖೆ ಶ್ವಾನ ಲೈಕಾ ಸಾವು…ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ…
- TV10 Kannada Exclusive
- October 7, 2023
- No Comment
- 118


ಮೈಸೂರು,ಅ7,Tv10 ಕನ್ನಡ
ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಶ್ವಾನ ಲೈಕಾ(9) ಸಾವನ್ನಪ್ಪಿದೆ.
ವಯೋ ಸಹಜ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಮೈಸೂರು ಜಿಲ್ಲಾ ಶ್ವಾನದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಲೈಕಾ ಗೆ
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಪೊಲೀಸ್ ಶ್ವಾನದಳದ ಕೆನಲ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ ಪಿ ನಂದಿನಿ ಅಂತಿಮ ಗೌರವ ಸಲ್ಲಿಸಿದ್ದಾರೆ.
ಸ್ಪೋಟಕ ಪತ್ತೆ ಬಗ್ಗೆ ವಿಶೇಷ ಪರಿಣಿತಿ ಹೊಂದಿದ್ದ ಲೈಕಾ
ರಾಷ್ಟ್ರಪತಿ ಪ್ರಧಾನಿ ಕೇಂದ್ರ ಮಂತ್ರಿಗಳು ಸಿಎಂ ಸಚಿವರ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಿತ್ತು.
ಹಲವು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಲೈಕಾ
ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿತ್ತು. ಲೈಕಾ ಶ್ವಾನ
ಸತೀಶ್ ಹಾಗೂ ಮಣಿಕಂಠರಿಂದ ತರಬೇತಿ ಪಡೆದಿತ್ತು. ಲೈಕಾ
ಸತತ 8 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದೆ.
ಅಂತ್ಯಕ್ರಿಯೆಗೂ ಮುನ್ನ ಲೈಕಾಗೆ ಪೂಜೆ ಸಲ್ಲಿಸಿ
ಮೃತದೇಹಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಗಿದೆ…