ಚಾಮುಂಡಿಬೆಟ್ಟ ಸೇರಿದಂತೆ ಟೌನ್ ಹಾಲ್ ಒಳಾವರಣ ಹೊರತು ಪಡಿಸಿ ನಗರದಲ್ಲಿ 30 ಗಂಟೆಗಳ ಕಾಲ 144 ಸೆಕ್ಷನ್ ಜಾರಿ…ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಆದೇಶ…
- TV10 Kannada Exclusive
- October 12, 2023
- No Comment
- 455



ಮೈಸೂರು,ಅ12,Tv10 ಕನ್ನಡ
ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಿನ್ನಲೆ ಮೈಸೂರು ನಗರದಲ್ಲಿ ಅಕ್ಟೋಬರ್ 12 ಮಧ್ಯ ರಾತ್ರಿಯಿಂದ ಅಕ್ಟೋಬರ್ 14 ಮುಂಜಾನೆ 6 ಗಂಟೆ ವರೆಗೆ ಚಾಮುಂಡಿ ಬೆಟ್ಟ ಸೇರಿದಂತೆ ಟೌನ್ ಹಾಲ್ ಒಳ ಆವರಣ ಹೊರತು ಪಡಿಸಿ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಆದೇಶಿಸಿದ್ದಾರೆ.ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಕೆಲವು ಸಂಘಸಂಸ್ಥೆಗಳು ನೀಡಿರುವ ಕರೆ ಹಿನ್ನಲೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.ಈ ಹಿನ್ನಲೆ ಮೈಸೂರು ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 12 ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 14 ಮಧ್ಯ ರಾತ್ರಿ ವರೆಗೆ ಚಾಮುಂಡಿ ಬೆಟ್ಟ ಸೇರಿದಂತೆ ಟೌನ್ ಹಾಲ್ ಒಳ ಆವರಣ ಹೊರತುಪಡಿಸಿ ಉಳಿದೆಡೆ ನಿಷೇಧಾಘ್ನೆ ಜಾರಿಗೊಳಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ…