ಪತಿಯ ಮುಂದೆ ಪತ್ನಿಯನ್ನ ಚುಡಾಯಿಸಿದ ಖದೀಮರು…ಪ್ರಶ್ನಿಸಿದ ಗಂಡನ ಮೇಲೆ ಹಲ್ಲೆ…
- Crime
- October 12, 2023
- No Comment
- 363

ಹುಣಸೂರು,ಅ12,Tv10 ಕನ್ನಡ
ಪತಿಯ ಮುಂದೆ ಪತ್ನಿಯನ್ನ ಚುಡಾಯಿಸಿದ ವರ್ತನೆಯನ್ನ ಪ್ರಶ್ನಿಸಿದ ಗಂಡನ ಮೇಲೆ ಕಿಡಿಗೇಡಿಗಳಿಬ್ಬರು ಮಾರಣಾಂತಿಕ ಹಲ್ಲೆ ನಡೆದಿದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಲ್ಲೆ ನಡೆಸಿದ ಖದೀಮರ ವಿರುದ್ದ ನೊಂದ ಮಹಿಳೆ ಬಿಳಿಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ತನ್ನ ಮಾನಭಂಗಕ್ಕೆ ಯತ್ನಿಸಿರುವ ಇಬ್ಬರಿಗೂ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.ಮಾದಾಪುರ ಗ್ರಾಮದ ಕುಮಾರ್ ಹಾಗೂ ಗಣೇಶ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ
ನಿನ್ನೆ ಸಂಜೆ ವೇಳೆ ನೊಂದ ಮಹಿಳೆ ತನ್ನ ಪತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅರಬ್ಬಿತಿಟ್ಟು ಬಳಿ ಅಡ್ಡ ಹಾಕಿದ ಗಣೇಶ ಹಾಗೂ ಕುಮಾರ ಹಿಂದೆ ಕುಳಿತಿದ್ದ ಮಹಿಳೆಯನ್ನ ಚುಡಾಯಿಸಿದ್ದಾರೆ.ಇದನ್ನ ಪತಿ ಲಕ್ಷ್ಮಣ ಪ್ರಶ್ನಿಸಿದ್ದಾನೆ.ಈ ವೇಳೆ ಮಾತಿನ ಚಕಮಕಿ ನಡೆದಿದೆ.ದ್ವೇಷ ಬೆಳೆಸಿಕೊಂಡ ಗಣೇಶ್ ಹಾಗೂ ಕುಮಾರ್ ಇಬ್ಬರೂ ಸೇರಿ ಲಕ್ಷ್ಮಣ್ ತಲೆಗೆ ಹಾಗೂ ಕೈಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಅಲ್ಲದೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.ಗಲಾಟೆ ನೋಡಿ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಆರೋಪಿಗಳು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.ಗಣೇಶ್ ಹಾಗೂ ಕುಮಾರ್ ವಿರುದ್ದ ಕಾನೂನು sexual assault ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ನೊಂದ ಮಹಿಳೆ ಒತ್ತಾಯಿಸಿದ್ದಾರೆ…