ಸಚಿವ ಮಧುಬಂಗಾರಪ್ಪ ರಿಂದ ಮಕ್ಕಳ ದಸರಾ ಉದ್ಘಾಟನೆ…

ಸಚಿವ ಮಧುಬಂಗಾರಪ್ಪ ರಿಂದ ಮಕ್ಕಳ ದಸರಾ ಉದ್ಘಾಟನೆ…

ಮೈಸೂರುಅ18,Tv10 ಕನ್ನಡ

ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಪೂರೈಸುವುದು ನನ್ನ ಜವಾಬ್ದಾರಿ ರಾಜ್ಯ ಸರ್ಕಾರ ಈ ಕರ್ತವ್ಯವನ್ನು ನನಗೆ ವಹಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದ್ದಾರೆ

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ – 2023ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅವಕಾಶದ ಕೊರತೆ ಇರುವುದರಿಂದ ಕೆಲವೊಮ್ಮೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲಾಗುವುದಿಲ್ಲ. ಮಕ್ಕಳ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಆವರಣದಲ್ಲಿರುವ ಮಕ್ಕಳ ವಸ್ತು ಪ್ರದರ್ಶನವನ್ನು ಗಮನಿಸಿದೆ, ಅತ್ಯಂತ ಆಕರ್ಷಣೆಯವಾದ ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆ ಎದ್ದು ತೋರುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಗೈದ ಪ್ರತಿಭಾವಂತ ಮಕ್ಕಳ ಜೊತೆಯಲ್ಲಿ ಕುಳಿತಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವರಾದ ಹೆಚ್ ಸಿ ಮಹದೇವಪ್ಪನವರು ಮಾತನಾಡಿ, ಮಕ್ಕಳ ದಸರಾ ಭಾಷಣ ಮಾಡುವುದಕ್ಕಲ್ಲ. ಮಕ್ಕಳ ಪ್ರತಿಭೆ, ಅವರು ಸಂತಸ ಅನುಭವಿಸುವುದನ್ನು ಕಣ್ಣಾರೆ ನೋಡುವುದಕ್ಕಾಗಿ. ಇಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ನೋಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ವಿಧಾನಸಭಾ ಶಾಸಕರಾದ ಹರೀಶ್ ಗೌಡ ರವರು ಮಾತನಾಡಿ, ಎಲ್ಲ ಮಕ್ಕಳಿಗೂ ದಸರಾ ಹಬ್ಬದ ಶುಭವನ್ನು ಹಾರೈಸಿದರು. ಇಂದಿನ ಮಕ್ಕಳ ಬೌದ್ಧಿಕ ಬೆಳವಣಿಗೆ ಹಾಗೂ ಅವರಲ್ಲಿರುವ ಪ್ರತಿಭೆ ನಮಗಿಂತ ಹೆಚ್ಚಿನದ್ದಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ವೇದಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಸಂತಸಪಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಮಾತನಾಡಿ, ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ವನ್ನು 2007 ಮಾಡಲಾಯಿತು. ಮಕ್ಕಳ ಸಂತೋಷವನ್ನು ಹೆಚ್ಚಿಸುವುದಕ್ಕಾಗಿ ಮೈಸೂರು ದಸರಾ ಮಹೋತ್ಸವದಲ್ಲೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದಸರಾ ವೇದಿಕೆಯು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ಸರಿಗಮಪ ಸೀಸನ್ 19ರ ದಿಯಾ ಹೆಗಡೆ ಪ್ರಗತಿ ಬಡಿಗೇರ್ ರಾಜ್ಯಮಟ್ಟದ ಸೋಲು ಡಾನ್ಸು ವಿಜೇತ ಗಂಗಾಧರ್ ಜಿಎಂ ಹಾಗೂ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಬಾಲ ಪ್ರತಿಭೆಗಳಿಗೆ ಸಚಿವರುಗಳು ಗೌರವ ಸಮರ್ಪಣೆ ಮಾಡಿ, ಚೆಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಪ ಮೇಯರ್ ಡಾ. ರೂಪ.ಜಿ, ಕಾರ್ಪೋರೇಟರ್ ಪರಿಮಳ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವಿಶೇಷಾಧಿಕಾರಿಗಳು ಹಾಗೂ ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ಅಧ್ಯಕ್ಷರಾದ ಸುಧಾ ಮಹದೇವಯ್ಯ, ಸರಿಗಮಪ ಖ್ಯಾತಿಯ ಪ್ರಗತಿ ಬಡಿಗೇರ್, ದಿಯಾ ಹೆಗ್ಡೆ, ರಾಜ್ಯಮಟ್ಟದ ಸೋಲೋ ಡಾನ್ಸ್ ವಿಜೇತ ಗಂಗಾಧರ ಜಿ.ಎಂ, ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಸೇರಿದಂತೆ ವಿವಿಧ ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು.

Spread the love

Related post

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…

Leave a Reply

Your email address will not be published. Required fields are marked *