ಪುರಭವನದ ತಳಮಹಡಿ ಪಾರ್ಕಿಂಗ್ ಲೋಕಾರ್ಪಣೆ… ಡಾ.ಹೆಚ್.ಸಿ.ಮಹದೇವಪ್ಪ ರಿಂದ ಉದ್ಘಾಟನೆ…
- TV10 Kannada Exclusive
- October 18, 2023
- No Comment
- 223

ಮೈಸೂರು,ಅ18,Tv10 ಕನ್ನಡ

ಪುರಭವನದ ಆವರಣದಲ್ಲಿ ನಿರ್ಮಿಸಲಾದ ಅಂಡರ್ ಗ್ರೌಂಡ್ ಪಾರ್ಕಿಂಗ್ ನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು ಉದ್ಘಾಟಿಸಿದರು.
ನಂತರ ಮಾತನಾಡಿ ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯ ಜನರಿಗೆ ತಮ್ಮ ವಾಹನವನ್ನು ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ವ್ಯವಸ್ಥಿತವಾಗಿ ನಿರ್ಮಿಸಿರುವ ವಾಹನ ನಿಲ್ದಾಣವು ಎಲ್ಲರಿಗೂ ಉಪಯೋಗವಾಗಲಿದ್ದು, ಸುಗಮ ಸಂಚಾರ ಸಾಧ್ಯವಾಗಲಿದೆ ಎಂದರು. ಸುಮಾರು 400 ಕ್ಕೂ ಹೆಚ್ಚ ವಾಹನಗಳನ್ನು ಪಾರ್ಕಿಂಗ್ ಮಾಡಬಹುದು. ಮುಂದಿನ ದಿನಗಳಲ್ಲಿ ಎರಡು ಸಾವಿರ ಸಾಮಾರ್ಥ್ಯದ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಜನರು ತಮ್ಮ ವಾಹನವನ್ನು ಇಲ್ಲಿ ಪಾರ್ಕಿಗ್ ಮಾಡಿ ಯಾವುದೇ ಕಿರಿಕಿರಿ ಇಲ್ಲದೆ ನಿರಾಳವಾಗಿ ನಗರವನ್ನು ವೀಕ್ಷಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.
ಈ ನಿಲ್ದಾಣವು ಕಾರಣಾಂತರದಿಂದ ತಡವಾಗಿ ಉದ್ಘಾಟನೆಯಾಗಿದೆ. ಯಾವುದೇ ಕಾಮಗಾರಿ ಕೆಲಸವನ್ನು ಬದ್ಧತೆ ಇರುವ ಗುತ್ತಿಗೆದಾರನಿಗೆ ನೀಡಬೇಕು. ಅವಕಾಶವಂಚಿತರಿಗೆ ಯೋಗ್ಯವಾದ ಅನುಭವವಿರುವ ವ್ಯಕ್ತಿಗೆ ಕೆಲಸ ನೀಡಿ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಹೇಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಜಿ.ಸೋಮಶೇಖರ್, ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…