ಇಬ್ಬರು ಯುವಕರ ನಡುವೆ ಹೊಡೆದಾಟ…ನೋಡುತ್ತಿದ್ದ ವೃದ್ದನ ಸಾವಿನಲ್ಲಿ ಅಂತ್ಯ…ಗುರಿ ತಪ್ಪಿದ ಕ್ರಿಕೆಟ್ ಬ್ಯಾಟ್ ಎಫೆಕ್ಟ್…

  • Crime
  • December 31, 2023
  • No Comment
  • 503

ಮೈಸೂರು,ಡಿ31,Tv10 ಕನ್ನಡ

ಇಬ್ಬರು ಯುವಕರ ನಡುವೆ ನಡೆದ ಹೊಡೆದಾಟ ಓರ್ವ ವೃದ್ದನ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೂಯೆಜ್ ಫಾರಂ ಬಳಿ ನಡೆದಿದೆ.ಅಗ್ರಹಾರದ ನಿವಾಸಿ ಲಿಂಗಣ್ಣ(70) ಸಾವನ್ನಪ್ಪಿದ ವೃದ್ದ.ಸೂಯೆಜ್ ಫಾರಂ ಗೇಟ್ ಬಳಿ ವೆಂಕಟೇಶ್ ಹಾಗೂ ಆಕಾಶ್ ಎಂಬುವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು.ಇಬ್ಬರ ನಡುವಿನ ಗಲಾಟೆ ಹೊಡೆದಾಟಕ್ಕೆ ತಿರುಗಿದೆ.ಕ್ರಿಕೆಟ್ ಬ್ಯಾಟ್ ತಂದ ವೆಂಕಟೇಶ್ ಜೋರಾಗಿ ಆಕಾಶ್ ಮೇಲೆ ಬೀಸಿದ್ದಾನೆ.ಆಕಾಶ್ ತಲೆ ಬಗ್ಗಿಸಿ ತಪ್ಪಿಸಿಕೊಂಡಿದ್ದಾನೆ.ಗುರಿ ತಪ್ಪಿದ ಬ್ಯಾಟ್ ಗಲಾಟೆ ನೋಡುತ್ತಾ ನಿಂತಿದ್ದ ವೃದ್ದ ಲಿಂಗಣ್ಣ ಮೇಲೆ ಬಿದ್ದಿದೆ.ಸ್ಥಳದಲ್ಲೇ ಕುಸಿದುಬಿದ್ದ ಲಿಂಗಣ್ಣ ರವರನ್ನ ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಲಿಂಗಣ್ಣ ಮೃತಪಟ್ಟಿದ್ದಾರೆ.ಬ್ಯಾಟ್ ಬೀಸಿದ ವೆಂಕಟೇಶ್ ಅರೆಸ್ಟ್ ಆಗಿದ್ದಾನೆ.ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *