ಹಾಲು ಉತ್ಪಾದಕರ ಸಂಘದಲ್ಲಿ ಕಿರಿಕ್…ಕಾರ್ಯದರ್ಶಿಯಿಂದ ಉಪಾಧ್ಯಕ್ಷನ ಮೇಲೆ ಹಲ್ಲೆ…ಆಸ್ಪತ್ರೆಯಲ್ಲಿ ಸಾವು…
- Crime
- January 22, 2024
- No Comment
- 305
ನಂಜನಗೂಡು,ಜ22,Tv10 ಕನ್ನಡ
ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ಬುದ್ದಿವಾದ ಹೇಳಿದ ಉಪಾಧ್ಯಕ್ಷನ ಮೇಲೆ ಕಾರ್ಯದರ್ಶಿ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದಲ್ಲಿ ನಡೆದಿದೆ.ಹಲ್ಲೆಗೊಳಗಾದ ಉಪಾಧ್ಯಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇಬ್ಜಾಲ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ಹಲ್ಲೆ ನಡೆಸಿದ ಆರೋಪಿ.ಹಲ್ಲೆಗೊಳಗಾದ ಮಹದೇವನಾಯಕ ಮೃತಪಟ್ಟ ಉಪಾಧ್ಯಕ್ಷ.
ಶಿವು ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ.ಈ ವಿಚಾರವಾಗಿ ಹಾಲು ಉತ್ಪಾದಕರು ಉಪಾಧ್ಯಕ್ಷ ಮಹದೇವನಾಯಕ ರವರ ಗಮನಕ್ಕೆ ತಂದಿದ್ದರು.ಈ ವಿಚಾರವಾಗಿ ಬುದ್ದಿ ಹೇಳಲು ಸಂಘಕ್ಕೆ ತೆರಳಿದ ವೇಳೆ ಶಿವು ತಾಯಿ ರವಿಯಮ್ಮ ಉಡಾಫೆಯಿಂದ ಮಾತನಾಡಿದ್ದರು.ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಈ ವೇಳೆ ಅಲ್ಲಿಗೆ ಬಂದ ಕಾರ್ಯದರ್ಶಿ ಶಿವು ಏಕಾ ಏಕಿ ಕಪಾಳಕ್ಕೆ ಹೊಡೆದು ನೆಲದ ಮೇಲೆ ಹಾಕಿ ಹಲ್ಲೆ ನಡೆಸಿದ್ದಾನೆ.ತೀವ್ರ ಹಲ್ಲೆಗೆ ಒಳಗಾದ ಮಹದೇವನಾಯಕನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಸಂಭಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿವು ಹಾಗೂ ರವಿಯಮ್ಮ ಮೇಲೆ ಪ್ರಕರಣ ದಾಖಲಾಗಿದೆ…