ಗಂಡ ಹೆಂಡತಿ ಜಗಳ ಬಿಡಿಸಲು ಬಂದ ಮಹಿಳೆ ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ…

  • Crime
  • January 23, 2024
  • No Comment
  • 306

ಮೈಸೂರು,ಜ23,Tv10 ಕನ್ನಡ

ಗಂಡ ಹೆಂಡತಿ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಮಹಿಳೆಗೆ ಚಾಕುವಿನಿಂದ ಇರಿದು ಕೊಂದ ಆರೋಪಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಅಲ್ವಿನ್ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ.2020 ರಲ್ಲಿ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ವೀರನಗೆರೆಯಲ್ಲಿ ಘಟನೆ ನಡೆದಿತ್ತು.ಲಷ್ಕರ್ ಠಾಣಾ ಪೊಲೀಸರು ಆರೋಪಿ ಅಲ್ವಿನ್ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಆರೋಪ ಸಾಬೀತಾದ ಹಿನ್ನಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ.ಎಂ.ಹಿರೇಮಠ್ ರವರು ತೀರ್ಪು ನೀಡಿದ್ದಾರೆ.ಹಾಗೂ 50 ಸಾವಿರ ದಂಡ ವಿಧಿಸಿದ್ದಾರೆ ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ವರ್ಷ ಸಾಮಾನ್ಯ ಸಜೆ ಅನುಭವಿಸುವ ತೀರ್ಪು ನೀಡಿದ್ದಾರೆ.

ಅಲ್ವಿನ್ ತನ್ನ ಪತ್ನಿ ಸೋನು ಜೊತೆ ಜಗಳ ಆಡುತ್ತಿದ್ದ ವೇಳೆ ಎದುರು ಮನೆಯಲ್ಲಿದ್ದ ಮಹದೇವಮ್ಮ ಬಿಡಿಸಲು ಬಂದಿದ್ದಾರೆ.ಈ ವೇಳೆ ಜಗಳ ಬಿಡಿಸಲು ನಿನ್ಯಾರು ಎಂದು ಪ್ರಶ್ನಿಸಿ ಚಾಕುವಿನಿಂದ ಇರಿದು ಕೊಂದಿದ್ದಾನೆ.ಆರೋಪಿಯನ್ನ ಅಂದಿನ ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಆರೋಪಕ್ಕೆ ಸಂಭಂಧಿಸಿದಂತೆ ಅಗತ್ಯ ದಾಖಲೆಗಳನ್ನ ಎಎಸ್ಸೈ ಸಿದ್ದರಾಜು ಸಿಬ್ಬಂದಿಗಳಾದ ಪ್ರಸನ್ನ ಶಂಭುಕರ,ಜನಾರ್ಧನ್ ಹಾಗೂ ಚಂದ್ರು ಸಂಗ್ರಹಿಸಿದ್ದರು.ಸರ್ಕಾರಿ ಅಭಿಯೋಜಕರಾದ ಹೆಚ್.ಇ.ಚಿನ್ನಪ್ಪ ಹಾಗೂ ಶ್ರೀಮತಿ ರಂಜನಾರಾವ್ ರವರು ವಾದ ಮಂಡಿಸಿದ್ದರು…

Spread the love

Related post

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು… ಗದಗ,ಆ17,Tv10 ಕನ್ನಡ ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಚಾರ ನಡೆದ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.ಮೂರು…
ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…

Leave a Reply

Your email address will not be published. Required fields are marked *