ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ…ಇಬ್ಬರು ಪೆಡ್ಲರ್ ಗಳ ಬಂಧನ…20.19 ಲಕ್ಷ ಮೌಲ್ಯದ ಗಾಂಜಾ ವಶ…

ಮೈಸೂರು,ಜ23,Tv10 ಕನ್ನಡ

ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಪೆಡ್ಲರ್ ಗಳನ್ನ ಬಂಧಿಸಲಾಗಿದ್ದು 20.19 ಲಕ್ಷ ಮೌಲ್ಯದ 57 ಕೆಜಿ 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಆಸಿಮ್ ಹಾಗೂ ನದೀಮ್ ಬಂಧಿತ ಆರೋಪಿಗಳು.ಮತ್ತೋರ್ವ ಆರೋಪಿ ಫರ್ಜು ಪರಾರಿಯಾಗಿದ್ದಾನೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮ್ರಾ ಮಸೀದಿ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ತೆರಳುತ್ತಿದ್ದ ಯುವಕರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಾಗ 1 ಕೆಜಿ ಗಾಂಜಾ ದೊರೆತಿದೆ.ಆರೋಪಿಗಳನ್ನ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಹದೇವಪುರ ಮುಖ್ಯರಸ್ತೆಯ ಕಾವೇರಿನಗರದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 56 ಕೆಜಿ 700 ಗ್ರಾಂ ಗಾಂಜಾ ದೊರೆತಿದೆ.ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಸಿಸಿಬಿ ನಿರೀಕ್ಷಕರಾದ ಪೂವಯ್ಯ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಲೇಪಾಕ್ಷ,ರಾಜು ಕೋನಕೇರಿ ಹಾಗೂ ಸಿಬ್ಬಂದಿಗಳಾದ ರಾಜು,ನಾಗೇಶ್,ಸತೀಶ್,ರಾಮೇಗೌಡ,ಮಂಜುನಾಥ್,ಮಂದುಕುಮಾರ್,ಅನಿಲ್ ಪುರುಷೋತ್ತಮ್,ಅರುಣ್ ಕುಮಾರ್,ರಘು,ರಾಜು,ಮಮತ,ಶ್ರೀನಿವಾಸ ಕಾರ್ಯಾಚರಣೆಯಲ್ಲ ಯಶಸ್ವಿಗೊಳಿಸಿದ್ದಾರೆ.ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಶ್ಲಾಘಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *