ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆ ಹಿರಿಯ ಸಂಶೋಧಕಿಗೆ ಸಹದ್ಯೋಗಿಯಿಂದ ಲೈಂಗಿಕ ಕಿರುಕುಳ…ನಗ್ನ ಚಿತ್ರಗಳನ್ನ ಕಳುಹಿಸಿ ಮಾನಸಿಕ ಹಿಂಸೆ…FIR ದಾಖಲು…

ಮೈಸೂರು,ಫೆ9,Tv10 ಕನ್ನಡ

ಮೈಸೂರಿನ ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕೋಮಲಾ(ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸಹದ್ಯೋಗಿ ಸಂತೋಷ್ ಕುಮಾರ್ ಮೊಹಂತಿ ಎಂಬುವರು ಮೊಬೈಲ್ ನಲ್ಲಿ ನಿರಂತರವಾಗಿ ತನ್ನ ನಗ್ನ ಚಿತ್ರಗಳನ್ನ ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ತಮಗಾದ ಕಿರುಕುಳಕ್ಕೆ ಬೇಸತ್ತ ಡಾ.ಕೋಮಲಾ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದು ಕಿರುಕುಳ ನೀಡುತ್ತಿರುವ ಸಂತೋಷ್ ಕುಮಾರ್ ಮೊಹಂತಿ ಮೇಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಫ್.ಐ.ಆರ್.ನಲ್ಲಿ ದಾಖಲಾದ ಅಂಶ..

ಒರಿಸ್ಸಾ ಮೂಲದ ಸಂತೋಷ್ ಕುಮಾರ್ ಮೊಹಂತಿ ರವರು 2019 ರಿಂದಲೂ ಬೆನ್ನು ಬಿದ್ದಿದ್ದು ಲವ್ ಯೂ ಎಂ ಮೆಸೇಜ್ ಗಳನ್ನ ಹಾಕುತ್ತಾ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.ಈ ಬಗ್ಗೆ ಡಾ.ಕೋಮಲಾ ರವರು ತಮ್ಮ ಸಹದ್ಯೋಗಿಗಳ ಬಳಿ ಹೇಳಿಕೊಂಡಿದ್ದಾರೆ.ಅಲ್ಲದೆ ಈ ಬಗ್ಗೆ ಹೆಚ್.ಓ.ಡಿ.ರವರ ಗಮನಕ್ಕೂ ತಂದಿದ್ದಾರೆ.ತನಗೆ ಮದುವೆ ಆಗಿದೆ ನಿಮಗೂ ಮದುವೆ ಆಗಿದೆ.ಹೀಗೆ ವರ್ತಿಸಬಾರದೆಂದು ಬುದ್ದಿವಾದ ಹೇಳಿದ್ದಾರೆ.ಹೀಗಿದ್ದರೂ ಸಂತೋಷ್ ಕುಮಾರ್ ಮೊಹಂತಿ ತಮ್ಮ ಚಾಳಿ ಮುಂದುವರೆಸಿದ್ದಾರೆ.10-01-2024 ರಂದು ತನ್ನ ಮೊಬೈಲ್ ನಿಂದ ಡಾ.ಕೋಮಲಾ ಗೆ ನಗ್ನ ಚಿತ್ರಗಳನ್ನ ಕಳಿಸಿದ್ದಾನೆ.ಇದನ್ನ ಡಾ.ಕೋಮಲಾ ಡಿಲೀಟ್ ಮಾಡಿದ್ದಾರೆ.ಫೋಟೋಸ್ ವೀಕ್ಷಣೆ ಮಾಡಿರುವುದನ್ನ ಖಚಿತಪಡಿಸಿಕೊಂಡ ಸಂತೋಷ್ ಕುಮಾರ್ ಮೊಹಂತೆ ಮತ್ತೆ ಮರುದಿನವೇ ತನ್ನ ಗುಪ್ತಾಂಗದ ಫೋಟೋಗಳನ್ನ ಕಳಿಸಿದ್ದಾನೆ.ಕೂಡಲೇ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.ಹಾಗೆ ಮಾಡಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ಮೆಸೇಜ್ ಮಾಡಿ ಬೆದರಿಸಿದ್ದಾನೆ.ಇವೆಲ್ಲಾ ಬೆಳವಣಿಗೆಗೆ ಬೇಸತ್ತ ಡಾ.ಕೋಮಲಾ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಂತೋಷ್ ಕುಮಾರ್ ಮೊಹಂತಿ ವಿರುದ್ದ ಕ್ರಮ ಕೈಗೊಳ್ಳುವಂತೆ FIR ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *