ಮಿಲಿಟರಿ ಅಧಿಕಾರಿ ಎಂದು ನಂಬಿಸಿದ…ಮನೆ ಬಾಡಿಗೆಗೆ ಬರುವುದಾಗಿ ತಿಳಿಸಿದ…1.96 ಲಕ್ಷ ವಂಚಿಸಿದ…ಆನ್ ಲೈನ್ ಫ್ರಾಡ್…
- Crime
- February 9, 2024
- No Comment
- 145
ಮೈಸೂರು,ಫೆ9,Tv10 ಕನ್ನಡ
ಮಿಲಿಟರಿ ಅಧಿಕಾರಿ ಎಂದು ಹೇಳಿ ಮನೆ ಬಾಡಿಗೆಗೆ ಬರುವುದಾಗಿ ನಂಬಿಸಿ 1.96 ಲಕ್ಷ ಹಣ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿಜಯನಗರ ಎರಡನೇ ಹಂತದ ಕೃಷ್ಣರಾಜ ಉಪಾಧ್ಯಾಯ ಎಂಬುವರಿಗೆ ಆನ್ ಲೈನ್ ಮೂಲಕ ವಂಚಕ ಕೈಚಳಕ ತೋರಿಸಿದ್ದಾನೆ. ಮನೆ ಬಾಡಿಗೆಗೆ ಇದೆ ಎಂದು ಕೃಷ್ಣರಾಜ ಉಪಾಧ್ಯಾಯ 99 ಏಕರ್ಸ್ ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದ್ದಾರೆ.ಇದನ್ನ ಗಮನಿಸಿದ ವಂಚಕ ತಾನು ಮಿಲಿಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೈಸೂರಿಗೆ ವರ್ಗಾವಣೆ ಆಗಿದೆ ನಿಮ್ಮ ಮನೆಗೆ ಬಾಡಿಗೆಗೆ ಬರುವುದಾಗಿ ತಿಳಿಸಿದ್ದಾನೆ.ವಂಚಕನ ಮಾತನ್ನ ಹಾಗೂ ಆತ ನೀಡಿದ ನಕಲಿ ದಾಖಲೆಗಳನ್ನ ನಂಬಿದ ಕೃಷ್ಣರಾಜ ಉಪಾಧ್ಯಾಯ ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದಾರೆ.ಅಡ್ವಾನ್ಸ್ ಹಣ ಗೂಗಲ್ ಪೇ ಮಾಡುವುದಾಗಿ ಹೇಳಿ ಮೊದಲು ಒಂದು ರೂ ಹಾಕಿ ನಂತರ ಖಾತೆಯ ಎಲ್ಲಾ ಮಾಹಿತಿ ಪಡೆದು 1.96 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.ಈ ಸಂಭಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…