ಮೈಸೂರು ವಲಯ ಕಚೇರಿ 1 ಮತ್ತು 2 ರಲ್ಲಿ ಪೌರಕಾರ್ಮಿಕರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ…40 ಕ್ಕೂ ಹೆಚ್ಚು ಮಂದಿಗೆ ವಿತರಣೆ…
- TV10 Kannada Exclusive
- February 23, 2024
- No Comment
- 220
ಮೈಸೂರು,ಫೆ23,Tv10 ಕನ್ನಡ
ಇಂದು ಮೈಸೂರು ವಲಯ ಕಚೇರಿ 1 ಮತ್ತು 2 ರಲ್ಲಿ ಪೌರಕಾರ್ಮಿಕರಿಗೆ ಉಚಿತವಾಗಿ ಅಯುಷ್ಮಾನ್ ಭಾರತ್ ಪ್ರದಾನ ಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಅರೋಗ್ಯ ಕರ್ನಾಟಕ ಕಾರ್ಡ್ ಅನ್ನು ಮಾಡಿಕೊಡಲಾಯಿತು.ಕರ್ನಾಟಕ ಒನ್ ಮೈಸೂರು ಜಿಲ್ಲೆ ಸಂಯೋಜಕರಾದ ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಪೌರಕಾರ್ಮಿಕರಿಗರ
ಆಯುಷ್ಮನ್ ಕಾರ್ಡ ನ ಪ್ರಯೋಜನಗಳನ್ನ ತಿಳಿಸಿಕೊಡಲಾಯಿತು.40 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕಾರ್ಡ್ ಪಡೆದುಕೊಂಡರು.ಹಾಗೂ ಕಾರ್ಡ್ ನ ಮಹತ್ವವನ್ನ ತಿಳಿಸಿಕೊಡಲಾಯಿತು.
ಆಯುಷ್ಮಾನ್ ಕಾರ್ಡ್ ನ ಪ್ರಯೋಜನಗಳು..
1 ಈ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನು ಮಾಡಿಸಿಕೊಳ್ಳುವುದರಿಂದ ರಾಜ್ಯದಲ್ಲಿರುವ ನೋಂದಾಯಿತ ಆಸ್ಪತ್ರೆಗಳಲ್ಲಿ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಬಿ ಪಿ ಎಲ್ ಕಾರ್ಡ್ ಹೊಂದಿರುವವರಿಗೆ 5 ಲಕ್ಷದವರೆಗೆ ಹಾಗು ಎ ಪಿ ಎಲ್ ಕಾರ್ಡ್ ಹೊಂದಿರುವವರಿಗೆ 1 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ.
2 ದೇಶಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕವನ್ನು ಈ ಯೋಜನೆಯಡಿಯಲ್ಲಿ ನೀಡುವಂತಿಲ್ಲ.
3 ಈ ಯೋಜನೆಯನ್ನು ಗ್ರಾಮೀಣ ಪ್ರದೇಶದವರು ಗ್ರಾಮ ಒನ್ ನಲ್ಲಿ ಮತ್ತು ನಗರ ಪ್ರದೇಶದವರು ಕರ್ನಾಟಕ ಒನ್ ನಲ್ಲಿ ಉಚಿತವಾಗಿ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.
ಅಯುಷ್ಮಾನ್ ಭಾರತ್ ಪ್ರದಾನ ಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಅರೋಗ್ಯ ಕರ್ನಾಟಕ ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಬೇಕಾಗಿರುವ ದಾಖಲಾತಿಗಳು.
1 ಆಧಾರ್ ಕಾರ್ಡ್
2 BPL / APL ರೇಷನ್ ಕಾರ್ಡ್
3 ಆಧಾರ್ ಗೆ ಲಿಂಕ್ ಹಾಗಿರುವ ಮೊಬೈಲ್ ನಂಬರ್
4 ಅರ್ಜಿದಾರರೇ ನೇರವಾಗಿ ಬಂದು ಹೆಲ್ತ್ ಕಾರ್ಡ್ ಮಾಡಿಸಿಕೊಳ್ಳಬೇಕು
ಈ ಕಾರ್ಯಕ್ರಮವನ್ನು ಮೈಸೂರು ಸಿಟಿ ಕಾರ್ಪೋರೇಶನ್ ಮತ್ತು ಹೆಲ್ತ್ ಡಿಪಾರ್ಟ್ಮೆಂಟ್ ಹಾಗೂ ಕರ್ನಾಟಕ ಒನ್ ಸಹಯೋಗದಲ್ಲಿ ಇಂದು ಉಚಿತ ಹೆಲ್ತ್ ಕಾರ್ಡ್ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ
ಡಾ. ಬೃಂದಾ
ಜಿಲ್ಲಾ ನೋಡಲ್ ಅಧಿಕಾರಿಗಳು, ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ.
ಹೆಲ್ತ್ ಡಿಪಾರ್ಟ್ಮೆಂಟ್ ನ ನಾಗೇಶ್ ಹಾಗೂ ಕರ್ನಾಟಕ ಒನ್ ಆಪರೇಟರ್ ತೇಜಸ್ವಿನಿ ಎ ಜಿ ಮತ್ತು ರಾಕೇಶ್ ಎಸ್ ರವರು ಉಪಸ್ಥಿತರಿದ್ದರು…