ಹೆತ್ತವರ ವಿರೋಧ ಲೆಕ್ಕಿಸದೆ ಅಪ್ರಾಪ್ತೆಯೊಂದಿಗೆ ವಿವಾಹ…ಮದುಮಗ ಸೇರಿದಂತೆ ಮೂವರ ವಿರುದ್ದ FIR

ಹೆತ್ತವರ ವಿರೋಧ ಲೆಕ್ಕಿಸದೆ ಅಪ್ರಾಪ್ತೆಯೊಂದಿಗೆ ವಿವಾಹ…ಮದುಮಗ ಸೇರಿದಂತೆ ಮೂವರ ವಿರುದ್ದ FIR

ಮೈಸೂರು,ಫೆ23,Tv10 ಕನ್ನಡ

ಹೆತ್ತವರ ವಿರೋಧವಿದ್ದರೂ ಲೆಕ್ಕಿಸದೆ ಅಪ್ರಾಪ್ತೆಯನ್ನ ವಿವಾಹವಾ ಮದುಮಗ ಹಾಗೂ ಪೋಷಕರ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮದುಮಗ ರಿಹಾನಾಚಪಾಷಾ,ಆತನ ತಂದೆ ಶೇಕ್ ಮೊಹಿದ್ದೀನ್ ತಾಯಿ ಫರ್ವೀನ್ ತಾಜ್ ವಿರುದ್ದ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.16 ವರ್ಷದ ಅಪ್ರಾಪ್ತೆಯನ್ನ ವಿವಾಹವಾಗಲು ಬಯಸಿದ್ದ ರಿಹಾನ್ ಪಾಷಾ ಮನವಿಯನ್ನ ಬಾಲಕಿಯ ತಾಯಿ ವಿರೋಧಿಸಿದ್ದಾರೆ.ಬಾಲಕಿಗೆ ಕೇವಲ 16 ವರ್ಷ ಕಾರಣ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ.ವರನ ಕಡೆಯವರು ಎಂಗೇಜ್ ಮೆಂಟ್ ಮಾಡಿಕೊಡಿ ನಂತರ 18 ವರ್ಷ ದಾಟಿದ ಮೇಲೆ ಮದುವೆ ಆಗುವುದಾಗಿ ನಂಬಿಸಿದ್ದಾರೆ.ಹುಡುಗನ ಕಡೆಯವರ ಮಾತನ್ನ ನಂಬಿ ಎಂಗೇಜ್ ಮೆಂಟ್ ಮಾಡಿದ್ದಾರೆ.ನಂತರ ಬಾಲಕಿಯ ಜೊತೆ ರಿಹಾನ್ ಪಾಷಾ ಸಂಪರ್ಕ ಬೆಳೆಸಿಕೊಂಡಿದ್ದಾನೆ.ಅಪ್ರಾಪ್ತೆಗೆ ತಲೆಕೆಡಿಸಿ ಬಾಲ್ಯವಿವಾಹ ಕಾನೂನಿಗೆ ವಿರುದ್ದ ಎಂದು ಹೇಳಿದರೂ ಲೆಕ್ಕಿಸದೆ ವಿವಾಹವಾಗಿದ್ದಾನೆ.ಅಪ್ರಾಪ್ತ ಮಗಳ ಮದುವೆ ಆದ ಮದುಮಗ ಹಾಗೂ ಆತನ ಹೆತ್ತವರ ವಿರುದ್ದ ಉದಯಗಿರಿ ಪೊಲೀಸ್ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *