ಮೃತವ್ಯಕ್ತಿ ಹೆಸರಲ್ಲಿದ್ದ ಆಸ್ತಿ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿ…ಮೂವರ ವಿರುದ್ದ FIR ದಾಖಲಿಸಲು ಮುಂದಾದ ಜಿಲ್ಲಾಡಳಿತ…

ಮೃತವ್ಯಕ್ತಿ ಹೆಸರಲ್ಲಿದ್ದ ಆಸ್ತಿ  ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿ…ಮೂವರ ವಿರುದ್ದ FIR ದಾಖಲಿಸಲು ಮುಂದಾದ ಜಿಲ್ಲಾಡಳಿತ…

ಮೈಸೂರು,ಫೆ25,Tv10.ಕನ್ನಡ

ಮೃತವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಾಂತರ ಬೆಲೆ ಬಾಳುವ ಜಮೀನು ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಿದ ಮೂವರು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.ಮೃತ ವ್ಯಕ್ತಿಯಿಂದ ಜಿಪಿಎ ಪಡೆದಂತೆ ನಕಲಿ ದಾಖಲೆ ಸೃಷ್ಟಿಸಿ ನಂತರ ಸದರಿ ಆಸ್ತಿಯನ್ನ ಖರೀದಿ ಮಾಡಿದ ಇಬ್ಬರು ವ್ಯಕ್ತಿಗಳನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರ ಆದೇಶದ ಮೇರೆಗೆ ಉಪವಿಭಾಗಾಧಿಕಾರಿಗಳಾದ ರಕ್ಷಿತ್ ರವರು ಎನ್.ಆರ್.ಠಾಣೆ ಪೊಲೀಸರಿಗೆ FIR ದಾಖಲಿಸಲು ಮುಂದಾಗಿದ್ದಾರೆ.

ರಾಜೇಂದ್ರ ನಗರ ನಿವಾಸಿಗಳಾದ ಎಂ.ಈಶ್ವರಯ್ಯ,ಇಲಿಯಾಸ್ ಅಹಮದ್ ಹಾಗೂ ಅಬೂಬಕರ್ ಎಂಬುವರನ್ನ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಮೈಸೂರು ತಾಲೂಕು ಕೆಸರೆ ಗ್ರಾಮ ಸ.ನಂ.609 ರ 0.14 ಗುಂಟೆ ಜಮೀನು ಕುಳ್ಳಯ್ಯ ಎಂಬುವರ ಹೆಸರಿನಲ್ಲಿದೆ.ಸದರಿ ಜಮೀನಿಗೆ ಎಂ.ಈಶ್ವರಯ್ಯ ಎಂಬುವರು ಕುಳ್ಳಯ್ಯ ರವರಿಂದ ಜಿ.ಪಿ.ಎ.ಮಾಡಿಸಿಕೊಂಡು ನೊಂದಾಯಿಸಿ ಇಲಿಯಾಸ್ ಅಹಮದ್ ಹಾಗೂ ಅಬೂಬಕರ್ ಗೆ ಮಾರಾಟ ಕ್ರಯ ಮಾಡಿದ್ದಾರೆ.ಕ್ರಯ ಮಾಡಿದ ಜಮೀನಿಗೆ ಖಾತೆ ಮಾಡಿಸಲು ಇಲಿಯಾಸ್ ಅಹಮದ್ ರವರು ದಾಖಲೆಗಳನ್ನ ಸಲ್ಲಿಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ.ಇಲಿಯಾಸ್ ಅಹಮದ್ ರವರು ಖಾತೆಗಾಗಿ ಸಲ್ಲಿಸಿದ ಕ್ರಯಪತ್ರ ಸಂಖ್ಯೆ 6236/21 ರ ದಾಖಲಾತಿಗಳನ್ನ ಪರಿಶೀಲಿಸಿದಾಗ ಕುಳ್ಳಯ್ಯ ರವರು ಎಂ.ಈಶ್ವರಯ್ಯ ಎಂಬುವರಿಗೆ ಜಿಪಿಎ ಮಾಡಿಕೊಟ್ಟಂತೆ ಕಂಡುಬಂದಿದೆ.ನೊಂದಾಯಿತ ಸಾಮಾನ್ಯ ಅಧಿಕಾರ ಪತ್ರ ಸಂಖ್ಯೆ 189/21-22 ರ ದಾಖಲೆ ಪರಿಶೀಲಿಸಿದಾಗ ಸದರಿ ಜಮೀನನ್ನ ಮಾರಾಟ ಹಾಗೂ ಇತರೆ ಅಧಿಕಾರಗಳನ್ನ ನೀಡಿದಂತೆ ಕಂಡುಬಂದಿದೆ.ಆದರೆ ಕುಳ್ಳಯ್ಯ ಹೆಸರಲ್ಲಿದ್ದ ವಂಶವೃಕ್ಷ ಧೃಢೀಕರಣ ಪತ್ರ ಸಂಖ್ಯೆ RD5018882464752 ಪರಿಶೀಲಿಸಿದಾಗ ಮತ್ತೊಂದು RD ಸಂಖ್ಯೆ 5018882469762 ಮೂಲ ಪತ್ರವನ್ನ ಗ್ರಾಫಿಕ್ ಮಾಡಿ ಪಾಂಡವಪುರ ತಾಲೂಕು ತಹಸೀಲ್ದಾರ್ ಪ್ರಮೋದ್ ಎಲ್ ಪಾಟೀಲ್ ನೀಡಿದಂತೆ ದಾಖಲೆ ಸೃಷ್ಟಿಮಾಡಿದ್ದು ಈ ಪತ್ರದ ಅಸಲಿ ಸಂಖ್ಯೆಯನ್ನ ಪರಿಶೀಲಿಸಿದಾಗ ಈ ಮೂಲ ಪತ್ರವು ಮಂಡಕಳ್ಳಿ ಗ್ರಾಮದ ಪುರುಷೋತ್ತಮ ಮತ್ತು ಚೂಡಾಮಣಿ ಪಡೆದಿರುವುದು ಕಂಡುಬರುತ್ತದೆ.ಹಾಗೂ ಸಿದ್ದಲಿಂಗಪುರ ಗ್ರಾಮದ ರಾಜಮ್ಮ ಮತ್ತು ಮಹದೇವ ರವರು ಪಡಿತರ ಚೀಟಿಗಾಗಿ ವಾಸದ ದೃಢೀಕರಣ ಪತ್ರ ಪಡೆದಂತೆ ಕಂಡುಬಂದಿದೆ.ನಕಲಿ ಗ್ರಾಫಿಕ್ ಪ್ರತಿ ಹಾಳೆಯಿಂದ ತಿದ್ದುಪಡಿಯಾಗಿರುವುದು ಬೆಳಕಿಗೆ ಬಂದಿದೆ.ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲಿಸಿದಾಗ ಕುಳ್ಳಯ್ಯ ಹೆಸರಿಗೆ RR 3082 ಅಂದರೆ 1930 ಇಸವಿ ಆಸುಪಾಸಿನಲ್ಲಿ ಖಾತೆಯಾಗಿದ್ದು ಮೃತ ಕುಳ್ಳಯ್ಯನ ಹೆಸರಲ್ಲಿ ಬೇರೆ ವ್ಯಕ್ತಿ ನೊಂದಾಯಿತ ಸಾಮಾನ್ಯ ಅಧಿಕಾರ ಪತ್ರ ಸಂಖ್ಯೆ 189/2021 ದಿನಾಂಕ 11-11-2021 ರಲ್ಲಿ ನೊಂದಣಿ ಮಾಡಿಸಿವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಕುಳ್ಳಯ್ಯನ ಹೆಸರಲ್ಲಿ ನಕಲಿ ವ್ಯಕ್ತಿ ಕರೆತಂದು ನಕಲಿ ಜಿಪಿಎ ಸೃಷ್ಟಿಸಿ ನೊಂದಣಿ ಮಾಡಿದ ವ್ಯಕ್ತಿ ಹಾಗೂ ಜಿಪಿಎ ಅಧಿಕಾರ ಪಡೆದಿರುವ ಎಂ.ಈಶ್ವರಯ್ಯ ಹಾಗೂ ಖರೀದಿದಾರರಾದ ಇಲಿಯಾಸ್ ಅಹಮದ್ ಮತ್ತು ಅಬೂಬಕರ್ ರನ್ನ ಬಂಧಿಸಿ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಾದ ರಕ್ಷಿತ್ ರವರು ಎನ್.ಆರ್.ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ…

Spread the love

Related post

ರಕ್ತದ ಮಡುವಿನಲ್ಲಿ ಯುವಕ ಪತ್ತೆ…ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು…ಘಟನಾ ಸ್ಥಳದಲ್ಲಿ ನಿಂಬೆಹಣ್ಣು,ಎಲೆ ಅಡಿಕೆ,101 ರೂ ಪತ್ತೆ…ವಾಮಾಚಾರ ಮಾಡಿ ಕೊಲೆ ಶಂಕೆ…

ರಕ್ತದ ಮಡುವಿನಲ್ಲಿ ಯುವಕ ಪತ್ತೆ…ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು…ಘಟನಾ ಸ್ಥಳದಲ್ಲಿ…

ರಕ್ತದ ಮಡುವಿನಲ್ಲಿ ಯುವಕ ಪತ್ತೆ…ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು…ಘಟನಾ ಸ್ಥಳದಲ್ಲಿ ನಿಂಬೆಹಣ್ಣು,ಎಲೆ ಅಡಿಕೆ,101 ರೂ ಪತ್ತೆ…ವಾಮಾಚಾರ ಮಾಡಿ ಕೊಲೆ ಶಂಕೆ… ನಂಜನಗೂಡು,ಅ18,Tv10 ಕನ್ನಡ ಕತ್ತು ಕೊಯ್ದ ಪರಿಣಾಮ…
ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ…

ಹಳೇ ವೈಷಮ್ಯ.. ಯುವಕನಿಗೆ ಚಾಕು ಇರಿತ… ಹುಣಸೂರು,ಅ18,Tv10 ಕನ್ನಡ ಹಳೇ ವೈಷಮ್ಯ ಹಿನ್ನಲೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಣಸೂರು ತಾಲ್ಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೃಷಿ ಕೂಲಿ ಕಾರ್ಮಿಕ…
ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ರಾಬರಿ ಪ್ರಕರಣ…ಆರೋಪಿ ಅಂದರ್…ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮೈಸೂರು,ಅ17,Tv10 ಕನ್ನಡ ಬಾಡಿಗೆ ನೆಪದಲ್ಲಿ ಚಾಲಕನಿಗೆ ಹಲ್ಲೆ ನಡೆಸಿ ಆಟೋ,ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾದ ಪ್ರಮುಖ ಆರೋಪಿಯನ್ನ ಬಂಧಿಸುವಲ್ಲಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಯಿಂದ ಆಟೋ…

Leave a Reply

Your email address will not be published. Required fields are marked *