ಯುಟ್ಯೂಬ್ ಚಾನೆಲ್ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಮಾ18,Tv10 ಕನ್ನಡ

ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿ ತನ್ನ ಪಾರ್ಟ್ನರ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವಿನಯ್,ಈತನ ಪತ್ನಿ ಮಮತ ,ಕಾರಿನ ಚಾಲಕ ರಾಘು ಹಾಗೂ ಚೆಂಗಪ್ಪ ಎಂಬುವರ ಮೇಲೆ ನೊಂದ ಮಹಿಳೆ ಎಫ್.ಐ.ಆರ್.ದಾಖಲು ಮಾಡಿದ್ದಾರೆ.

ನೊಂದ ಮಹಿಳೆಯ ಪತಿ ಚಂದು ಹಾಗೂ ವಿನಯ್ ಇಬ್ಬರೂ ಸೇರಿ ಉಖ ಖಿಗಿ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.ಚಾನೆಲ್ ಕೆಲಸ ಹೆಚ್ಚಾಗಿರುತ್ತದೆ ಎಂದು ಕಾರಣ ನೀಡಿ ವಿನಯ್ ತನ್ನ ಪಾರ್ಟ್ನರ್ ಚಂದು ಹಾಗೂ ಪತ್ನಿಗೆ ತಾನಿದ್ದ ಬೋಗಾದಿ ಮನೆಯಲ್ಲೇ ವಾಸವಿರುವಂತೆ ವ್ಯವಸ್ಥೆ ಮಾಡಿದ್ದಾನೆ.ಕೆಲವು ದಿನಗಳ ಹಿಂದೆ ವಿನಯ್ ಮಧ್ಯರಾತ್ರಿ ಚಂದು ಮನೆಗೆ ಬಂದು ಪತ್ನಿಯನ್ನ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ.ಈ ವೇಳೆ ಸ್ಥಳಕ್ಕೆ ಬಂದ ಚಂದು ಪತ್ನಿಯ ರಕ್ಷಣೆಗೆ ಯತ್ನಿಸಿದ್ದಾರೆ. ವಿನಯ್ ಗೆ ಕಾರಿನ ಚಾಲಕ ರಾಘು ಜೊತೆ ಸೇರಿಕೊಂಡು ಚಂದು ಮೇಲೆ ಹಲ್ಲೆ ನಡೆಸಿದ್ದಾರೆ.ಇಬ್ಬರಿಂದ ತಪ್ಪಿಸಿಕೊಳ್ಳಲು ಚಂದು ಮನೆಯಿಂದ ಹೊರಗೆ ಓಡಿದ್ದಾರೆ.ಮರುದಿನ ವಿನಯ್ ಪತ್ನಿ ಮಮತಾ ಬಂದು ಚಂದು ಪತ್ನಿಯ ಮನ ಒಲಿಸಲು ಯತ್ನಿಸಿದ್ದಾಳೆ.ಇದಕ್ಕೆ ಒಪ್ಪದ ಕಾರಣ ಬೆದರಿಕೆ ತಂತ್ರ ಉಪಯೋಗಿಸಿದ್ದಾಳೆ.ಈ ವೇಳೆ ಚೆಂಗಪ್ಪ ಎಂಬ ವ್ಯಕ್ತಿ ಬಂದು ಖಾಲಿ ಪೇಪರ್ ಗಳಿಗೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದಾನೆ.ನಾಲ್ವರು ಸೇರಿ ನೊಂದ ಮಹಿಳೆಯಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲು ಯತ್ನಿಸಿದ್ದಾರೆ.ಇದೇ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದು ನೊಂದ ಮಹಿಳೆಯನ್ನ ರಕ್ಷಿಸಿದ್ದಾರೆ.ಸಧ್ಯ ನೊಂದ ಮಹಿಳೆ ಲೈಂಗಿಕ ಕಿರುಕುಳ ನೀಡಿದ ವಿನಯ್ ಹಾಗೂ ಸಾಥ್ ನೀಡಿದ ಪತ್ನಿ ಮಮತಾ ,ಚಾಲಕ ರಾಘು ಮತ್ತು ಚೆಂಗಪ್ಪ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *