ಬ್ಯಾಂಕ್ ಆಫ್ ಬರೋಡಾ ಗೆ 49.99 ಲಕ್ಷ ವಂಚನೆ…ಚಾಲಾಕಿ ದಂಪತಿ ವಿರುದ್ದ FIR ದಾಖಲು…
- CrimeMysore
- March 17, 2024
- No Comment
- 626
ಮೈಸೂರು,ಮಾ17,Tv10 ಕನ್ನಡ
ಒಂದೇ ಆಸ್ತಿಯನ್ನ ಎರಡು ಬ್ಯಾಂಕ್ ಗಳಲ್ಲಿ ಅಡಮಾನವಿಟ್ಟ ಚಾಲಾಕಿ ದಂಪತಿ ವಿರುದ್ದ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಸರಸ್ವತಿಪುರಂ ಬ್ರಾಂಚ್ ನಲ್ಲಿ 49.99 ಲಕ್ಷ ಸಾಲ ಪಡೆದು ಅದೇ ದಾಖಲಾತಿಯನ್ನ ತಿದ್ದುಪಡಿ ಮಾಡಿ ಬೆಂಗಳೂರಿನ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಾಲ ಪಡೆದು ವಂಚಿಸಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.ಮೈಸೂರಿನ ಜೆಪಿ ನಗರ ನಿವಾಸಿಗಳಾದ ನಿರಂಜನ್ ಹಾಗೂ ನಂದಿನಿ ದಂಪತಿ ವಿರುದ್ದ ಚೀಟಿಂಗ್ ಪ್ರಕರಣ ದಾಖಲಾಗಿದೆ.
ನಿರಂಜನ್ ಹಾಗೂ ನಂದಿನಿ ರವರಿಗೆ ಸೇರಿದ ಆಸ್ತಿಯ ಮೂಲ ದಾಖಲಾತಿಗಳನ್ನ ಸರಸ್ವತಿಪುರಂ ಬ್ರಾಂಚ್ ನ ಬ್ಯಾಂಕ್ ಆಫ್ ಬರೋಡದಲ್ಲಿ ಅಡಮಾನವಿಟ್ಟು 2016 ರಲ್ಲಿ 49.99 ಲಕ್ಷ ಸಾಲ ಪಡೆದಿದ್ದಾರೆ.ಸಾಲ ಪಡೆದು 8 ವರ್ಷಗಳಾದರೂ ಹಣ ಮರುಪಾವತಿಸಿಲ್ಲ.ಸಾಲದ ಹಣ ಬಡ್ಡಿ ಸೇರಿ 79,71,306/- ರೂ ಪಾವತಿಸಬೇಕಿರುತ್ತದೆ.ಈ ಮಧ್ಯೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಸುರಭಿ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಹ ಇದೇ ದಾಖಲಾತಿಗಳನ್ನ ತಿದ್ದುಪಡಿ ಮಾಡಿ ಸಾಲ ಪಡೆದಿರುವುದು ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರ ಗಮನಕ್ಕೆ ಬಂದಿದೆ.ಅಲ್ಲದೆ ಈ ಬಗ್ಗೆ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನವರೂ ಸಹ ಪತ್ರ ವ್ಯವಹಾರ ಮಾಡಿ ದಂಪತಿಯ ವಂಚನೆಯನ್ನ ಬಯಲಿಗೆ ತಂದಿದ್ದಾರೆ.ಈ ಸಂಭಂಧ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಎಂ.ಯೋಗೇಶ್ ರವರು ಕಿಲಾಡಿ ದಂಪತಿ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ…