ಪ್ಲೈಯಿಂಗ್ ಸ್ಕ್ವಾಡ್ ಗೆ ಯಾಮಾರಿಸಿ ಹಣ ಸುಲಿಯುವ ಯತ್ನ…ಪೊಲೀಸರ ಸೋಗಿನಲ್ಲಿ ಖದೀಮರ ಕೈಚಳಕ…ಓರ್ವ ಅಂದರ್…ಇಬ್ಬರು ಪರಾರಿ…

ಪ್ಲೈಯಿಂಗ್ ಸ್ಕ್ವಾಡ್ ಗೆ ಯಾಮಾರಿಸಿ ಹಣ ಸುಲಿಯುವ ಯತ್ನ…ಪೊಲೀಸರ ಸೋಗಿನಲ್ಲಿ ಖದೀಮರ ಕೈಚಳಕ…ಓರ್ವ ಅಂದರ್…ಇಬ್ಬರು ಪರಾರಿ…

ಮೈಸೂರು,ಏ7,Tv10 ಕನ್ನಡ

ಚುನಾವಣೆ ಹಿನ್ನಲೆ ವಾಹನ ತಪಾಸಣೆ ನಡೆಸುವ ಸೋಗಿನಲ್ಲಿ ಮೂವರು ಯುವಕರು ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನೇ ಯಾಮಾರಿಸಿ ಹಣ ಸುಲಿಯಲು ಯತ್ನಿಸಿದ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.ಮೂವರು ಯುವಕರ ಓರ್ವ ಸಿಕ್ಕಿಬಿದ್ದಿದ್ದು ಮತ್ತಿಬ್ಬರು ಯುವಕರು ಪರಾರಿಯಾಗಿದ್ದಾರೆ.ಯರಗನಹಳ್ಳಿ ನಿವಾಸಿ ಮಾದೇಗೌಡ.@.ಮಧು ಬಂಧಿತ ಆರೋಪಿಯಾಗಿದ್ದು ಉಳಿದ ಇಬ್ಬರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಏ.4 ರ ಮಧ್ಯ ರಾತ್ರಿ ಫ್ಲೈಯಿಂಗ್ ಸ್ಕ್ವಾಡ್ 3 ರ ತಂಡದಲ್ಲಿ PWD ಎಇ ಕಾರ್ಯಪ್ಪ,SDA ಮಹದೇವ್,ಚಾಲಕ ಲಿಖಿನ್ ಹಾಗೂ ಮೇಟಗಳ್ಳಿ ಠಾಣೆಯ ಪೇದೆ ಶಶಿಕುಮಾರ್ ಕರ್ತವ್ಯದಲ್ಲಿದ್ದು ಕಾರಿನಲ್ಲಿ ಸಾತಗಳ್ಳಿ ಬಸ್ ಡಿಪೋ ಕಡೆಯಿಂದ ದೇವೇಗೌಡ ಸರ್ಕಲ್ ನತ್ತ ಬರುತ್ತಿದ್ದ ವೇಳೆ ಮೂವರು ಯುವಕರು ಬೈಕ್ ಅಡ್ಡ ನಿಲ್ಲಿಸಿ ಚುನಾವಣೆ ಹಿನ್ನಲೆ ಪೊಲೀಸರ ಅಣತಿಯಂತೆ ವಾಹನಗಳನ್ನ ತಪಾಸಣೆ ಮಾಡುತ್ತಿದ್ದೇವೆ ಹಣ ಇದ್ದರೆ ಕೊಟ್ಟುಬಿಡಿ ಎಂದು ಧಂಕಿ ಹಾಕಿದ್ದಾರೆ.ಹಣ ಕೊಡದಿದ್ದಲ್ಲಿ ಜೀವಸಹಿತ ಮುಂದೆ ಹೋಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.ಈ ವೇಳೆ ಬ್ಯಾಕ್ ಸೀಟ್ ನಲ್ಲಿ ಕುಳಿತಿದ್ದ ಪೇದೆ ಶಶಿಕುಮಾರ್ ಇಳಿದು ಬಂದು ಯಾವ ಠಾಣೆ ಪೊಲೀಸರು ಕಳಿಸಿದ್ದಾರೆ ಎಂದು ಪ್ರಶ್ನಿಸಿದಾಗ ಓಡಿಹೋಗಲು ಯತ್ನಿಸಿದ್ದಾರೆ.ಈ ವೇಳೆ ಮಾದೇಗೌಡ ಸಿಕ್ಕಿಬಿದ್ದಿದ್ದಾನೆ.ಮತ್ತಿಬ್ಬರು ಪರಾರಿಯಾಗಿದ್ದಾರೆ.ವಶಕ್ಕೆ ಪಡೆದ ಆರೋಪಿ ಮಾದೇಗೌಡ ನ್ನ ಆಲನಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *