ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಪೊಲೀಸಪ್ಪನ ಸೋಗಿನಲ್ಲಿ ವಸೂಲಿಗೆ ವಿಫಲ ಯತ್ನ…ರಿಯಲ್ ಪೊಲೀಸ್ ಹೆಸರೇಳಿದ ತಕ್ಷಣ ಎಸ್ಕೇಪ್…

ಹುಣಸೂರು,ಏ7,Tv10 ಕನ್ನಡ

ಪೊಲೀಸಪ್ಪನ ಸೋಗಿನಲ್ಲಿ ಅಮಾಯಕರ ಬಳಿ ಹಣ ವಸೂಲಿಗೆ ಬಂದ ವ್ಯಕ್ತಿಯ ನಿಜ ಬಣ್ಣ ತಿಳಿದ ತಕ್ಷಣ ಪರಾರಿಯಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂದನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಹೆಚ್.ಡಿ.ಕೋಟೆ ಪೇದೆ ಸುರೇಶ್ ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಲು ಬಂದ ಖದೀಮನ ವರ್ತನೆಯಿಂದ ಅನುಮಾನಗೊಂಡು ನಿಜವಾದ ಪೊಲೀಸರಿಗೆ ಫೋನ್ ಮಾಡಿದ ತಕ್ಷಣ ಖದೀಮ ಎಸ್ಕೇಪ್ ಆಗಿದ್ದಾನೆ.

ಹಂದನಹಳ್ಳಿಯ ಕುಟುಂಬವೊಂದರಲ್ಲಿ ವರದಕ್ಷಿಣೆ ಪ್ರಕರಣ ದಾಖಲಾಗಿದೆ.ಛಾಯಾದೇವಿ ಎಂಬುವರು ತಮ್ಮ ಪತಿ ಸಂಪತ್ ಕುಮಾರ್ ಮೇಲೆ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.ಈ ಮಾಹಿತಿ ಅರಿತ ಅಪರಿಚಿತ ವ್ಯಕ್ತಿ ತಾನು ಹೆಚ್.ಡಿ.ಕೋಟೆ ಠಾಣೆಯ ಪೇದೆ ನಿಮ್ಮ ಪತಿಯನ್ನ ಬಂಧಿಸುವಂತೆ ವಾರೆಂಟ್ ಆಗಿದೆ ಈ ಬಗ್ಗೆ ಹೇಳಿಕೆ ಪಡೆಯಬೇಕು ಎಂದು ಹೇಳಿಕೊಂಡು ಛಾಯಾದೇವಿ ರವರ ಮನೆಗೆ ಬಂದಿದ್ದಾನೆ.ಸಂಪತ್ ಕುಮಾರ್ ನ್ನ ಬಂಧಿಸುತ್ತಿದ್ದೇವೆ ಎಂದು ನಂಬಿಸಿ ಹೇಳಿಕೆ ಪಡೆಯವಂತೆ ನಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದ್ದು ಸ್ಥಳೀಯರಾದ ನಿಶಾಂತ್ ಎಂಬುವರು ಹೆಚ್.ಡಿ.ಕೋಟೆ ಠಾಣೆ ಫೋನ್ ಮಾಡಿ ಈತನ ಬಗ್ಗೆ ವಿಚಾರಿಸಿದ್ದಾರೆ.ಈತನ ಫೋಟೋವನ್ನ ಹೆಚ್.ಡಿ.ಕೋಟೆ ಠಾಣೆಯ ನಿರೀಕ್ಷಕರಿಗೆ ಕಳುಹಿಸಿದಾಗ ಪೋಲೀಸ್ ಅಲ್ಲವೆಂದು ಖಚಿತವಾಗಿದೆ.ಈ ಬೆಳವಣಿಗೆ ನಡೆಯುತ್ತಿದ್ದಂತೆಯೇ ನಕಲಿ ಪೊಲೀಸ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *