ನಿಮ್ಮ ಮೊಬೈಲ್,ಆಧಾರ್ ಕಾರ್ಡ್ ದುರ್ಬಳಕೆ ಆಗ್ತಿದೆ ಅಂತ ಕರೆ ಬಂದ್ರೆ ಹುಷಾರ್…ಲಕ್ಷಾಂತರ ಹಣಕ್ಕೆ ಉಂಡೆನಾಮ ಗ್ಯಾರೆಂಟಿ…

ನಿಮ್ಮ ಮೊಬೈಲ್,ಆಧಾರ್ ಕಾರ್ಡ್ ದುರ್ಬಳಕೆ ಆಗ್ತಿದೆ ಅಂತ ಕರೆ ಬಂದ್ರೆ ಹುಷಾರ್…ಲಕ್ಷಾಂತರ ಹಣಕ್ಕೆ ಉಂಡೆನಾಮ ಗ್ಯಾರೆಂಟಿ…

ಮೈಸೂರು,ಏ7,Tv10 ಕನ್ನಡ

ನಿಮ್ಮ ಮೊಬೈಲ್ ಮತ್ತು ಆಧಾರ್ ಕಾರ್ಡ್ ದುರ್ಬಳಕೆ ಆಗುತ್ತಿದೆ,ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆ ಆಗುತ್ತಿದೆ ಅಂತ ಅನಾಮಧೇಯ ಕರೆ ಬಂದ್ರೆ ಹುಷಾರಾಗಿರಿ.ಇತ್ತೀಚಿನ ದಿನಗಳಲ್ಲಿ ಇಂತಹ ಕಾರಣ ನೀಡಿ ಬೆದರಿಸಿ ಹಣ ಕೀಳುವ ಖದೀಮರು ಹೆಚ್ಚಾಗಿದ್ದಾರೆ.ಮೈಸೂರಿನಲ್ಲಿ ಕಳೆದೆರಡು ದಿನಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಮಾಯಕರು 24 ಲಕ್ಷ ರೂ ಕಳೆದುಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ ಜಯಲಕ್ಷ್ಮಿಪುರಂ ನ ನಿವಾಸಿ ಹೇಮಂತ್ ಎಂಬುವರು ಬರೋಬರಿ 12 ಲಕ್ಷ ಕಳೆದುಕೊಂಡಿದ್ದಾರೆ.ಅನಾಮಧೇಯ ವ್ಯಕ್ತಿಯೊಬ್ಬ FedEx ಸಿಬ್ಬಂದಿ ಎಂದು ಪರಿಚಯಿಸಿಕೊಂಡು ನಿಮ್ಮ ಮಗಳು USA ನಿಂದ ಕಳುಹಿಸಿದ ಪಾರ್ಸಲ್ ರಿಜೆಕ್ಟ್ ಆಗಿದೆ ಎಂದಿದ್ದಾನೆ.ನಂತರ ಮುಂಬೈ ಪೊಲೀಸ್ ಎಂದು ಮತ್ತೊಬ್ಬ ವ್ಯಕ್ತಿ ಮಾತನಾಡಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಮನಿ ಲಾಂಡರಿಂಗ್ ಹಾಗೂ ಡ್ರಗ್ಸ್ ದಂಧೆಗೆ ಲಿಂಕ್ ಆಗಿದೆ ತನಿಖೆ ಮಾಡಬೇಕೆಂದು ಹೆದರಿಸಿದ್ದಾನೆ.ವಂಚಕನ ಮಾತುಗಳನ್ನ ನಂಬಿದ ಹೇಮಂತ್ ರವರು ಹಂತಹಂತವಾಗಿ ಆತ ಹೇಳಿದ ಬ್ಯಾಂಕ್ ಖಾತೆಗಳಿಗೆ 12 ಲಕ್ಷ ವರ್ಗಾಯಿಸಿ ಮೋಸ ಹೋಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿಜಯನಗರ ನಿವಾಸಿ ರಾಮಕೃಷ್ಣ ಎಂಬುವರು 12.18 ಲಕ್ಷ ಕಳೆದುಕೊಂಡಿದ್ದಾರೆ.ನಿಮ್ಮ ಮೊಬೈಲ್ ಸಂಖ್ಯೆ ಕಾನೂನು ಬಾಹಿರ ಚಟುವಟಿಕೆಗೆ ಬಳಕೆಯಾಗಿದೆ ಒಂದು ಗಂಟೆಯಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.ಮೊಬೈಲ್ ಸಂಖ್ಯೆ ನನ್ನದಲ್ಲ ಎಂದು ಹೇಳಿದ್ರೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿ ನಿಮ್ಮ ಬ್ಯಾಂಕ್ ಖಾತೆಗಳು ಮನಿ ಲಾಂಡರಿಂಗ್ ಗೆ ಬಳಕೆಯಾಗಿದೆ ಈ ವಿಚಾರದಲ್ಲಿ ನಿಮ್ಮನ್ನ ಅರೆಸ್ಟ್ ಮಾಡುವುದಾಗಿ ಹೆದರಿಸಿದ್ದಾನೆ.ಈತನ ಬೆದರಿಕೆಗೆ ಹೆದರಿ ರಾಮಕೃಷ್ಣ ರವರು 12.18 ಲಕ್ಷ ವಿವಿದ ಖಾತೆಗಳಿಂದ ವರ್ಗಾಯಿಸಿದ್ದಾರೆ.ಮೂರು ದಿನಗಳಲ್ಲಿ ನಿಮ್ಮ ಹಣ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ನಂಬಿಸಿ ವಂಚಿಸಿದ್ದಾರೆ.ಎರಡೂ ಪ್ರಕರಣಗಳು ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *