Tv10 ಸುದ್ದಿ ಇಂಪ್ಯಾಕ್ಟ್…ಕುಡುಕರ ಅಡ್ಡಾ ತೆರುವು…ವರದಿಯಾದ ಕೆಲವೇ ಗಂಟೆಗಳಲ್ಲಿ ಕ್ಲೀನ್…

Tv10 ಸುದ್ದಿ ಇಂಪ್ಯಾಕ್ಟ್…ಕುಡುಕರ ಅಡ್ಡಾ ತೆರುವು…ವರದಿಯಾದ ಕೆಲವೇ ಗಂಟೆಗಳಲ್ಲಿ ಕ್ಲೀನ್…

ಮೈಸೂರು,ಏ12,Tv10 ಕನ್ನಡ

ಕುಡುಕರ ತಾಣವಾಗಿದ್ದ ಫುಟ್ ಪಾತ್ ಫಾಸ್ಟ್ ಫುಡ್ ಸ್ಥಳಕ್ಕೆ ಮೈಸೂರು ನಗರ ಪಾಲಿಕೆ ಆಯುಕ್ತರು ಬ್ರೇಕ್ ಹಾಕಿದ್ದಾರೆ.Tv10 ಕನ್ನಡ ವಾಹಿನಿಯಲ್ಲಿ ಪ್ರಚಾರವಾದ ಕೆಲವೇ ಗಂಟೆಗಳಲ್ಲ ಪಾಲಿಕೆ ಆಯುಕ್ತರಾದ ಡಾ.ಮಧು ರವರು ಕುಡುಕರ ತಾಣಕ್ಕೆ ಮುಕ್ತಿ ನೀಡಿದ್ದಾರೆ.ಇದು Tv10 ಕನ್ನಡ ವಾಹಿನಿಯ ಇಂಪ್ಯಾಕ್ಟ್.

ಮೈಸೂರಿನ ಪ್ರತಿಷ್ಠಿತ ಗೋಕುಲಂ ಬಾಡಾವಣೆಯ ಹಾಪ್ ಕಾಮ್ ಬಳಿ ಫುಟ್ ಪಾತ್ ನಲ್ಲಿ ತಲೆ ಎತ್ತಿದ್ದ ಫಾಸ್ಟ್ ಫುಡ್ ಬಳಿಯ ಸ್ಥಳವೊಂದು ಕುಡುಕರ ತಾಣವಾಗಿತ್ತು.ಹಾಪ್ ಕಾಮ್ ಹಾಗೂ ಫಾಸ್ಟ್ ಫುಡ್ ಮಧ್ಯದ ಜಾಗದ ಮೇಲೆ ಮೇಲ್ಛಾವಣಿ ನಿರ್ಮಿಸಿದ್ದು ಸದರಿ ಜಾಗ ಕುಡುಕರ ಅಡ್ಡೆಯಾಗಿತ್ತು.ಸಮೀಪದಲ್ಲೇ ವಿವಿ ಪುರಂ ಪೊಲೀಸ್ ಠಾಣೆ ಇದೆ,ನಿರ್ಮಲಾ ಕಾನ್ವೆಂಟ್ ಇದೆ,ಜನನಿಬಿಡ ಪ್ರದೇಶವೂ ಹೌದು.ಇಂತಹ ಸ್ಥಳವನ್ನ ಕುಡುಕರು ಅಡ್ಡಾ ಮಾಡಿಕೊಂಡು ಕಂಠ ಪೂರ್ತಿ ಕುಡಿದು ಮಲಗುವ ದೃಶ್ಯಗಳು ಸಾರ್ವಜನಿಕರಿಗೆ ಮುಜುಗರ ತರುತ್ತಿತ್ತು.ಈ ಬಗ್ಗೆ ಇಂದು ಬೆಳಿಗ್ಗೆ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಪಾಲಿಕೆ ಆಯುಕ್ತರಾದ ಡಾ.ಮಧು ರವರು ಎಚ್ಚೆತ್ತುಕೊಂಡು ವಲಯ 4 ರ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳವನ್ನ ತೆರುವುಗೊಳಿಸಿದ್ದಾರೆ.ಪಾಲಿಕೆ ಆಯುಕ್ತರ ಆದೇಶದಂತೆ ವಲಯ ಕಚೇರಿ 4 ರ ಆರೋಗ್ಯಾಧಿಕಾರಿ ಲಕ್ಷ್ಮಣ್ ರವರು ಕುಡುಕರ ಅಡ್ಡೆಯನ್ನ ತೆರುವುಗೊಳಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *