ಯುಗಾದಿ ಸಂಭ್ರಮ…ರಂಗೋಲಿ ಸ್ಪರ್ಧೆ…ವಿಜೇತರಿಗೆ ಬಹುಮಾನ ವಿತರಣೆ…

ಯುಗಾದಿ ಸಂಭ್ರಮ…ರಂಗೋಲಿ ಸ್ಪರ್ಧೆ…ವಿಜೇತರಿಗೆ ಬಹುಮಾನ ವಿತರಣೆ…

ಮೈಸೂರು,ಏ12,Tv10 ಕನ್ನಡ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಂದ ಕ್ರೋಧಿನಾಮ ಸಂವತ್ಸರದ ಮೊದಲ ದಿನದ ಯುಗಾದಿ ಹಬ್ಬವನ್ನ ಕೆ.ಎಂ.ಪಿ.ಕೆ.ಟ್ರಸ್ಟ್ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಿದೆ.ಆನ್ಲೈನ್ ನಲ್ಲಿ ಕರೆ ನೀಡಲಾಗಿದ್ದ ರಂಗೋಲಿ ಸ್ಪರ್ದೆ ಅದ್ದೂರಿಯಾಗಿ ನಡೆದಿದೆ.ಸುಮಾರು 350 ಕ್ಕೂ ಹೆಚ್ಚು ಸ್ಪರ್ಧಾಳಿಗಳು ಭಾಗವಹಿಸಿದ್ದು ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಬಿಡಿಸುವ ಮೂಲಕ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಉತ್ತಮವಾಗಿ ಮೂಡಿಬಂದ ಹತ್ತು ರಂಗೋಲಿಗೆ ಬಹುಮಾನ ವಿತರಿಸಲಾಯಿತು.
ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ಸ್ಪರ್ಧಿಗಳಾದ
ಕುವೆಂಪು ನಗರ ನಿವಾಸಿ ಗೀತಾ, ಕುಂಬಾರಕೊಪ್ಪಲಿನ ವಿಜಯಲಕ್ಷ್ಮಿ, ದೇವರಮ್ಮಣಿ ಅಗ್ರಹಾರದ ವಿಜಯಲಕ್ಷ್ಮಿ ಕುಲಕರ್ಣಿ, ಹಿನಕಲ್ ನ ದೇವಕಿ, ಶ್ರೀರಾಂಪುರದ ವಿಮಲಾ ಪರಿಶಿವಮೂರ್ತಿ, ಸರಸ್ವತಿಪುರಂನ ಸಾನ್ವಿ. ಸಿ, ಕುವೆಂಪು ನಗರದ ಸುಧಾ ಪ್ರಸಾದ್, ವಿದ್ಯಾನಗರ ವಿಜಯ. ಆರ್, ಜೆ ಸಿ ನಗರದ ಜೆ ನಾಗು ಬಾಯ್, ಕೃಷ್ಣಮೂರ್ತಿಪುರಂನ ಉಷಾರಾಣಿ ರವರಿಗೆ ಬಹುಮಾನ ವಿತರಿಸಲಾಯಿತು.ಜಿಲ್ಲಾ ಭ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ರವರು ಬಹುಮಾನ ವಿತರಿಸಿ ಮಾತನಾಡಿ ಯುಗಾದಿ ಹಬ್ಬವನ್ನ ಸಂಭ್ರಮಿಸಿದಂತೆ ಚುನಾವಣಾ ಹಬ್ಬವನ್ನೂ ಆಚರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ನಾಗಶ್ರೀ ಸುಚಿಂದ್ರ, ಮಿರ್ಲೆ ಪಣೀಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *