
ಐಸ್ ಕ್ರೀಂ ತಂದ ಆಪತ್ತು…ಅವಳಿ ಮಕ್ಕಳು ಸಾವು…ತಾಯಿ ಅಸ್ವಸ್ಥ…
- TV10 Kannada Exclusive
- April 18, 2024
- No Comment
- 253
ಮಂಡ್ಯ,ಏ18,Tv10 ಕನ್ನಡ
ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ್ದು ತಾಯಿ ಅಸ್ವಸ್ಥರಾದ ದುರ್ಘಟನೆ ಮಂಡ್ಯ ಜಿಲ್ಲೆ
ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತ ದುರ್ದೈವಿಗಳು.
ನಿನ್ನೆ ಸಂಜೆ ಗ್ರಾಮಕ್ಕೆ ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಖರೀದಿಸಿ ತಿಂದಿದ್ದರು.
ಐಸ್ ಕ್ರೀಂ ತಿಂದ ಕೆಲ ಸಮಯಕ್ಕೆ ಅಸ್ವಸ್ಥರಾಗಿದ್ದರು. ಮಕ್ಕಳು ಮನೆಯಲ್ಲೇ ಸಾವನ್ಬಪ್ಪಿದ್ದಾರೆ.ತಾಯಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…