ಚುನಾವಣೆ ರಾಯಭಾರಿ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಶ್ರೀನಾಥ್ ಮತದಾನ…
- TV10 Kannada Exclusive
- April 26, 2024
- No Comment
- 328
ಮೈಸೂರು ,ಏ26,Tv10 ಕನ್ನಡ
ಮೈಸೂರು ಕೊಡಗು ಲೋಕಸಭಾ ಚುನಾವಣೆಯ ರಾಯಭಾರಿ ಹಾಗೂ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಶ್ರೀನಾಥ್ ರವರು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ನಗರದ ಜ್ಞಾನ ಗಂಗಾ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಜನರು ಬೇಗ ಬೇಗ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು.ಈಗಾಗಲೇ ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ವತಿತಿಂದ ಸಾಕಷ್ಟು ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮೈಸೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಮತದಾನ ಮಾಡಿದ್ದೇನೆ. ಮತದಾನ ನನ್ನ ಹಕ್ಕು, ಎಲ್ಲರೂ ಮತದಾನ ಮಾಡಿ, ಮತದಾರರು ಬಂದು ನಿಮ್ಮ ನಾಯಕರನ್ನ ನೀವೇ ಆಯ್ಕೆ ಮಾಡಬೇಕು ಯುವ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಯೋಚನೆ ಮಾಡಿ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು…