ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್…ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ…

ದಾಖಲೆ ಇಲ್ಲದ 81.90 ಲಕ್ಷ ಹಣ ಸೀಜ್…ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ…

ಮೈಸೂರು,ಏ25,Tv10 ಕನ್ನಡ

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 81,90,900/- ರೂ ನಗದು ವಶಪಡಿಸಿಕೊಳ್ಳಲಾಗಿದೆ.ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದ ಹಣ ದೊರೆತಿದೆ.ಮೂರು ಮಂದಿ KA 09 MB 4996 ನೊಂದಣೆ ಸಂಖ್ಯೆಯ ಕಾರಿನಲ್ಲಿ ಸಾಗಿಸಲಾಗುತ್ತಿದ್ದರು.ದಾಖಲೆಗಳನ್ನ ಒದಗಿಸದ ಕಾರಣ ಹಣ ಸೀಜ್ ಮಾಡಲಾಗಿದೆ.ಖಾಸಗಿ ಸಂಸ್ಥೆಯ ಹಣ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಆದ್ರೆ ಇದಕ್ಕೆ ಸೂಕ್ತ ದಾಖಲೆಗಳು ಒದಗಿಸುವಲ್ಲಿ ವಿಫಲರಾಗಿದ್ದಾರೆ.ಎಟಿಎಂ ನಲ್ಲಿ ಹಣ ಡೆಪಾಸಿಟ್ ಮಾಡಲು ಹಣ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.ಭಾರಿ ಮೊತ್ತದ ಹಣ ಸಾಗಿಸುವ ವೇಳೆ ಸೂಕ್ತ ಭದ್ರತೆ ಇಲ್ಲದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.FST ಕಾರಿಯಪ್ಪ SST ನವೀನ್ ಸಿ ರವರ ತಂಡ ತಪಾಸಣೆ ನಡೆಸುವ ವೇಳೆ ಹಣ ದೊರೆತಿದೆ.ಉಪವಿಭಾಗಾಧಿಕಾರಿ ನಂದೀಶ್ ಹಾಗೂ ತಹಸೀಲ್ದಾರ್ ಮಹೇಶ್ ಕುಮಾರ್ ಹಾಗೂ ಉಪತಹಸೀಲ್ದಾರ್ ವಿಶ್ವನಾಥ್ ಸಮ್ಮುಖದಲ್ಲಿ ಜಪ್ತಿ ಮಾಡಲಾದ ಹಣವನ್ನ ಜಿಲ್ಲಾ ಖಜಾನೆಗೆ ರವಾನಿಸಲಾಗಿದೆ.ಮಾಹಿತಿಯನ್ನ ಐಟಿ ಅಧಿಕಾರಿಗಳಿಗೂ ಸಹ ನೀಡಲಾಗಿದೆ.ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ಗುರುಚೇತನ್,ಸತೀಶ್ ಪಾಲ್ ಹಾಗೂ ಮಹೇಶ್ ಭಾಗಿಯಾಗಿದ್ದಾರೆ….

Spread the love

Related post

ಕೌಟುಂಬಿಕ ಕಲಹ: ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಕೌಟುಂಬಿಕ ಕಲಹ: ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಮೈಸೂರು,ಡಿ4,Tv10 ಕನ್ನಡ ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯ ಕತ್ತನ್ನ ಕೊಯ್ದ ಕೊಲೆಗೈದ ಪತಿ ಪೊಲೀಸರಿಗೆ ಶರಣಾದ ಘಟನೆ ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.ಶೃತಿ (28) ಪತಿಯಿಂದ ಕೊಲೆಯಾದ ಪತ್ನಿ.ಮನು(27)…
ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ FIR ದಾಖಲು…

ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ…

ಮೈಸೂರು,ಡಿ3,Tv10 ಕನ್ನಡ ಸಂಘದ ಸದಸ್ಯರ ಅನುಕೂಲಕ್ಕಾಗಿ ಜಮೀನು ಖರೀದಿಸಿ ವಸತಿ ನಿವೇಶನಗಳನ್ನ ಅಭಿವೃದ್ದಿ ಕೊಡಿಸುವುದಾಗಿ ನಂಬಿಸಿ ಕೋ.ಆಪರೇಟಿವ್ ಸೊಸೈಟಿ ಒಂದಕ್ಕೆ ಕೋಟ್ಯಾಂತರ ರೂ ವಂಚಿಸಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್…
ಹುಣಸೂರು:ಒಂಟಿಯಾಗಿದ್ದ ವೃದ್ದೆ ಬರ್ಬರ ಕೊಲೆ…

ಹುಣಸೂರು:ಒಂಟಿಯಾಗಿದ್ದ ವೃದ್ದೆ ಬರ್ಬರ ಕೊಲೆ…

ಹುಣಸೂರು,ಡಿ3,Tv10 ಕನ್ನಡ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆಯನ್ನ ಬರ್ಭರವಾಗಿ ಕೊಲೆಗೈದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.ಶಾಂತಕುಮಾರಿ (70) ಕೊಲೆಯಾದ ದುರ್ದೈವಿ.ಪುತ್ರ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿದ್ದ…

Leave a Reply

Your email address will not be published. Required fields are marked *