ಮತದಾನ ಮಾಡಿ ತೆರಳುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿ… ಸ್ಥಳದಲ್ಲಿಯೇ ಇಬ್ಬರ ಸಾವು…
- TV10 Kannada Exclusive
- April 26, 2024
- No Comment
- 222
ನಂಜನಗೂಡು,ಏ26,Tv10 ಕನ್ನಡ
ಪಾದಚಾರಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ತಾಂಡವಪುರ ಬಳಿ ನಡೆದಿದೆ.ಶಿವಣ್ಣ(40) ಹಾಗೂ ಬೈಕ್ ಸವಾರ ಮಿಥುನ್(19) ಮೃತ ದುರ್ದೈವಿಗಳು. ಬೈಕ್ ನಲ್ಲಿದ್ದ ಮತ್ತೋರ್ವ ಸವಾರ ಅನಿಲ್ ಪಟೇಲ್ ಗಾಯಗೊಂಡಿದ್ದಾನೆ.
ಶಿವಣ್ಣ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದರು.ಈ ವೇಳೆ ಬೈಕ್ ನಲ್ಲಿ ವೇಗವಾಗಿ ಬಂದ ಯುವಕರು ನಡೆದು ತೆರಳುತ್ತಿದ್ದ ಶಿವಣ್ಣಗೆ ಢಿಕ್ಕಿ ಹೊಡೆದಿದ್ದಾರೆ.ಶಿವಣ್ಣ ಹಾಗೂ ಮಿಥುನ್ ಸ್ಥಳದಲ್ಲೇ ಸಾವನ್ನಪ್ಪಿದರೆ ಅನಿಲ್ ಪಟೇಲ್ ಗಾಯಗೊಂಡಿದ್ದಾನೆ.
ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…