ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್ ಅಂದರ್…

ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್ ಅಂದರ್…

ಮೈಸೂರು,ಏ30,Tv10 ಕನ್ನಡ

ಐಪಿಎಲ್ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ಹಣ ಕಳೆದುಕೊಂಡು ಮಾಡಿದ್ದ ಸಾಲ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್ ಇದೀಗ ಕುವೆಂಪುನಗರ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.ಮಂಡ್ಯ ಜಿಲ್ಲೆ ಗೆಂಡೆಕೊಪ್ಪಲು ಗ್ರಾಮದ ಕೇಶವ (26) ಬಂಧಿತ ಆರೋಪಿಯಾಗಿದ್ದು ಈತನಿಂದ 1.20 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.
ಬಿಇ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಕೇಶವ ಕಳೆದ ಮೂರು ವರ್ಷಗಳಿಂದ ಐಪಿಎಲ್ ಬೆಟ್ಟಿಂಗ್ ದಂಧೆಗೆ ದಾಸನಾಗಿ 3 ಲಕ್ಷ ಹಣ ಕಳೆದುಕೊಂಡಿದ್ದ.ಸಾಲ ಹೆಚ್ಚಾದ ಹಿನ್ನಲೆ ತೀರಿಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದ.ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳುವು ಮಾಡಿ ಸಿಕ್ಕಿಬಿದ್ದ ಕೇಶವ ನಿಂದ ಸಧ್ಯ ಪೊಲೀಸರು 2 ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.ಈ ಹಿಂದೆ ಈತ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನ ಕಳುವು ಮಾಡಿದ 8 ಪ್ರಕರಣಗಳಿವೆ.ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರೂ ಐಪಿಎಲ್ ಬೆಟ್ಟಿಂಗ್ ಹುಚ್ಚಿನಿಂದ ದಾರಿತಪ್ಪಿ ಇದೀಗ ಬೈಕ್ ಕಳ್ಳನಾಗಿರುವ ಕೇಶವ ಜೈಲು ಕಂಬಿ ಎಣಿಸುತ್ತಿದ್ದಾನೆ.

ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆಆರ್ ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಯೋಗೇಶ್ ಹಾಗೂ ಪಿಎಸ್ಸೈ ಗೋಪಾಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥ್,ಆನಂದ್,ಹಜರತ್ ಆಲಿ,ಸುರೇಶ್ ಹಾಗೂ ನಾಗೇಶ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ರವರು ಯಶಸ್ವಿ ಕಾರ್ಯಾಚರಣೆಯನ್ನ ಪ್ರಶಂಸಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *