ಮೈಸೂರು:ಮಹಿಳೆಗೆ ದೂರದ ಸಂಭಂಧಿಯಿಂದ ಬ್ಲಾಕ್ ಮೇಲೆ…ನಡವಳಿಕೆಯ ಫೋಟೋಗಳನ್ನ ಹಿಡಿದು ಧಂಕಿ…

ಮೈಸೂರು:ಮಹಿಳೆಗೆ ದೂರದ ಸಂಭಂಧಿಯಿಂದ ಬ್ಲಾಕ್ ಮೇಲೆ…ನಡವಳಿಕೆಯ ಫೋಟೋಗಳನ್ನ ಹಿಡಿದು ಧಂಕಿ…

ಮೈಸೂರು,ಮೇ6,Tv10 ಕನ್ನಡ

ಮಹಿಳೆಯ ವಾಯ್ಸ್ ರೆಕಾರ್ಡ್ ಹಾಗೂ ನಡುವಳಿಕೆಯ ಫೋಟೋಗಳನ್ನ ಫ್ಯಾಮಿಲಿಗೆ ಕಳುಹಿಸಿ ಗೌರವಕ್ಕೆ ಧಕ್ಕೆ ತರುವುದಾಗಿ ದೂರದ ಸಂಭಂಧಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.ನಾನು ಕರೆದಾಗ ಬರಬೇಕು ಇಲ್ಲದಿದ್ದಲ್ಲಿವ್ಯವಹಾರಕ್ಕಾಗಿ ಕೊಟ್ಟ ಸಾಲದ ಹಣ ಹಿಂದಿರುಗಿಸಬೇಕು.ತಪ್ಪಿದ್ದಲ್ಲಿ ಕುಟುಂಬದವರಿಗೆ ಫೋಟೋಗಳನ್ನ ಕಳುಹಿಸುವುದಾಗಿ ಧಂಕಿ ಹಾಕಿದ್ದಾನೆ.ಬ್ಲಾಕ್ ಮೇಲೆ ಮಾಡಿರುವ ಆರೋಪಿಗೆ ಮತ್ತೊಂದು ಮಹಿಳೆ ಸಾಥ್ ನೀಡಿದ್ದಾಳೆ.ಇಬ್ಬರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣನಗರದಲ್ಲಿ ಬಾಟಿಕ್ ನಡೆಸುತ್ತಿರುವ ಮಹಿಳೆಗೆ ದೂರದ ಸಂಭಂಧಿಯಾದ ಕೊಯಮತ್ತೂರಿನ ಉಮಾಪತಿ ಪರಿಚಯವಾಗಿ ಹತ್ತಿರವಾಗಿದ್ದಾರೆ.ಕೊಯಮತ್ತೂರಿನಲ್ಲಿ ಬುಸಿನೆಸ್ ಮನ್ ಆಗಿರುವ ಉಮಾಪತಿ ಮಹಿಳೆಗೆ ಸಾಕಷ್ಟು ಬಾರಿ ಆರ್ಥಿಕ ನೆರವು ನೀಡಿದ್ದಾರೆ.ಈ ಮಧ್ಯೆ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಶೀಲಾಗೋಪಾಲ್ ಎಂಬುವರನ್ನ ಮಹಿಳೆ ಉಮಾಪತಿಗೆ ಪರಿಚಯಿಸಿದ್ದಾರೆ.ಶೀಲಾಗೋಪಾಲ್ ಹಾಗೂ ಉಮಾಪತಿ ಆತ್ಮೀಯರಾಗಿದ್ದಾರೆ.ಈ ಬೆಳವಣಿಗೆ ನಂತರ ಮಹಿಳೆ ಹಾಗೂ ಶೀಲಾಗೋಪಾಲ್ ನಡುವೆ ಮನಸ್ಥಾಪವಾಗಿದೆ.ಮಹಿಳೆಯ ನಡುವಳಿಕೆ ಬಗ್ಗೆ ಶೀಲಾಗೋಪಾಲ್ ರವರು ಉಮಾಪತಿ ಬಳಿ ತಿಳಿಸಿದ್ದಾರೆ.ಈ ವೇಳೆ ಉಮಾಪತಿ ಮಹಿಳೆಗೆ ಫೋನ್ ಮಾಡಿ ನೀನು ಬೇರೆಯವರ ಜೊತೆ ಸಂಭಂಧ ಬೆಳೆಸಿದ್ದೀಯ,ನಾನು ಕರೆದಾಗ ಬರಬೇಕು ಎಂದು ಬೆದರಿಕೆ ಹಾಕಿದ್ದಾರೆ.ಆಗ ಮಹಿಳೆಯ ಮಗಳು ಉಮಾಪತಿ ರವರ ನಂಬರ್ ಬ್ಲಾಕ್ ಮಾಡಿದ್ದಾರೆ.ನಂತರ ವಿದೇಶದಲ್ಲಿ ತಂಗಿರುವ ಮತ್ತೊಬ್ಬ ಮಗಳ ಮೊಬೈಲ್ ಗೆ ಫೋನ್ ಮಾಡಿ ನಾನು ಕೊಟ್ಟ ಹಣ ಹಿಂದಿರುಗಿಸಬೇಕು ಇಲ್ಲದಿದ್ದಲ್ಲಿ ನಿಮ್ಮ ತಾಯಿಯ ನಡುವಳಿಕೆಯ ವಾಯ್ಸ್ ರೆಕಾರ್ಡ್ ಗಳು ಹಾಗೂ ಫೋಟೋಗಳನ್ನ ಇಡೀ ಕುಟುಂಬಕ್ಕೆ ಕಳುಹಿಸಿ ಗೌರವಕ್ಕೆ ಧಕ್ಕೆ ಬರುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.ಸಧ್ಯ ಮಹಿಳೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಉಮಾಪತಿ ಹಾಗೂ ಶೀಲಾ ಗೋಪಾಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *