ಮೈಸೂರು:ಮಹಿಳೆಗೆ ದೂರದ ಸಂಭಂಧಿಯಿಂದ ಬ್ಲಾಕ್ ಮೇಲ್…ನಡವಳಿಕೆಯ ಫೋಟೋಗಳನ್ನ ಹಿಡಿದು ಧಂಕಿ…

ಮೈಸೂರು:ಮಹಿಳೆಗೆ ದೂರದ ಸಂಭಂಧಿಯಿಂದ ಬ್ಲಾಕ್ ಮೇಲ್…ನಡವಳಿಕೆಯ ಫೋಟೋಗಳನ್ನ ಹಿಡಿದು ಧಂಕಿ…

ಮೈಸೂರು,ಮೇ6,Tv10 ಕನ್ನಡ

ಮಹಿಳೆಯ ವಾಯ್ಸ್ ರೆಕಾರ್ಡ್ ಹಾಗೂ ನಡುವಳಿಕೆಯ ಫೋಟೋಗಳನ್ನ ಫ್ಯಾಮಿಲಿಗೆ ಕಳುಹಿಸಿ ಗೌರವಕ್ಕೆ ಧಕ್ಕೆ ತರುವುದಾಗಿ ದೂರದ ಸಂಭಂಧಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.ನಾನು ಕರೆದಾಗ ಬರಬೇಕು ಇಲ್ಲದಿದ್ದಲ್ಲಿ ವ್ಯವಹಾರಕ್ಕಾಗಿ ಕೊಟ್ಟ ಸಾಲದ ಹಣ ಹಿಂದಿರುಗಿಸಬೇಕು.ತಪ್ಪಿದ್ದಲ್ಲಿ ಕುಟುಂಬದವರಿಗೆ ಫೋಟೋಗಳನ್ನ ಕಳುಹಿಸುವುದಾಗಿ ಧಂಕಿ ಹಾಕಿದ್ದಾನೆ.ಬ್ಲಾಕ್ ಮೇಲ್ ಮಾಡಿರುವ ಆರೋಪಿಗೆ ಮತ್ತೊಂದು ಮಹಿಳೆ ಸಾಥ್ ನೀಡಿದ್ದಾಳೆ.ಇಬ್ಬರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣನಗರದಲ್ಲಿ ಬಾಟಿಕ್ ನಡೆಸುತ್ತಿರುವ ಮಹಿಳೆಗೆ ದೂರದ ಸಂಭಂಧಿಯಾದ ಕೊಯಮತ್ತೂರಿನ ಉಮಾಪತಿ ಪರಿಚಯವಾಗಿ ಹತ್ತಿರವಾಗಿದ್ದಾರೆ.ಕೊಯಮತ್ತೂರಿನಲ್ಲಿ ಬುಸಿನೆಸ್ ಮನ್ ಆಗಿರುವ ಉಮಾಪತಿ ಮಹಿಳೆಗೆ ಸಾಕಷ್ಟು ಬಾರಿ ಆರ್ಥಿಕ ನೆರವು ನೀಡಿದ್ದಾರೆ.ಈ ಮಧ್ಯೆ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಶೀಲಾಗೋಪಾಲ್ ಎಂಬುವರನ್ನ ಮಹಿಳೆ ಉಮಾಪತಿಗೆ ಪರಿಚಯಿಸಿದ್ದಾರೆ.ಶೀಲಾಗೋಪಾಲ್ ಹಾಗೂ ಉಮಾಪತಿ ಆತ್ಮೀಯರಾಗಿದ್ದಾರೆ.ಈ ಬೆಳವಣಿಗೆ ನಂತರ ಮಹಿಳೆ ಹಾಗೂ ಶೀಲಾಗೋಪಾಲ್ ನಡುವೆ ಮನಸ್ಥಾಪವಾಗಿದೆ.ಮಹಿಳೆಯ ನಡುವಳಿಕೆ ಬಗ್ಗೆ ಶೀಲಾಗೋಪಾಲ್ ರವರು ಉಮಾಪತಿ ಬಳಿ ತಿಳಿಸಿದ್ದಾರೆ.ಈ ವೇಳೆ ಉಮಾಪತಿ ಮಹಿಳೆಗೆ ಫೋನ್ ಮಾಡಿ ನೀನು ಬೇರೆಯವರ ಜೊತೆ ಸಂಭಂಧ ಬೆಳೆಸಿದ್ದೀಯ,ನಾನು ಕರೆದಾಗ ಬರಬೇಕು ಎಂದು ಬೆದರಿಕೆ ಹಾಕಿದ್ದಾರೆ.ಆಗ ಮಹಿಳೆಯ ಮಗಳು ಉಮಾಪತಿ ರವರ ನಂಬರ್ ಬ್ಲಾಕ್ ಮಾಡಿದ್ದಾರೆ.ನಂತರ ವಿದೇಶದಲ್ಲಿ ತಂಗಿರುವ ಮತ್ತೊಬ್ಬ ಮಗಳ ಮೊಬೈಲ್ ಗೆ ಫೋನ್ ಮಾಡಿ ನಾನು ಕೊಟ್ಟ ಹಣ ಹಿಂದಿರುಗಿಸಬೇಕು ಇಲ್ಲದಿದ್ದಲ್ಲಿ ನಿಮ್ಮ ತಾಯಿಯ ನಡುವಳಿಕೆಯ ವಾಯ್ಸ್ ರೆಕಾರ್ಡ್ ಗಳು ಹಾಗೂ ಫೋಟೋಗಳನ್ನ ಇಡೀ ಕುಟುಂಬಕ್ಕೆ ಕಳುಹಿಸಿ ಗೌರವಕ್ಕೆ ಧಕ್ಕೆ ಬರುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.ಸಧ್ಯ ಮಹಿಳೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಉಮಾಪತಿ ಹಾಗೂ ಶೀಲಾ ಗೋಪಾಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *