ನಕಲಿ ಕೀ ಬಳಸಿ ಮನೆ ದೋಚಿದ ಮಾಲೀಕ…ಆತಂತ್ರವಾದ ಕುಟುಂಬ…

ನಕಲಿ ಕೀ ಬಳಸಿ ಮನೆ ದೋಚಿದ ಮಾಲೀಕ…ಆತಂತ್ರವಾದ ಕುಟುಂಬ…

ಮೈಸೂರು,ಜೂ19,Tv10 ಕನ್ನಡ

ನಕಲಿ ಕೀ ಬಳಸಿ ಬಾಡಿಗೆ ನೀಡಿದ್ದ ಮನೆಯನ್ನ ಮಾಲೀಕನೇ ದೋಚಿದ ಘಟನೆ ಮೈಸೂರಿನ ಲೋಕನಾಯಕನಗರದಲ್ಲಿ ನಡೆದಿದೆ.ಸರ್ವಸ್ವವನ್ನೂ ಕಳೆದುಕೊಂಡ ಬಾಡಿಗೆದಾರ ಇದೀಗ ಅತಂತ್ರವಾಗಿದ್ದಾರೆ.ಫುಡ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ ಆಗಿರುವ ಮೇಘರಾಜ್ ರವರ ಕುಟುಂಬ ಇದೀಗ ಅತಂತ್ರಕ್ಕೆ ಸಿಲುಕಿದೆ.ಮಾಲೀಕ ಮಂಜುನಾಥ್ ಹಾಗೂ ಈತನ ಸಹೋದರನ ಮೇಲೆ ಮೇಘರಾಜ್ ರವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಜುನಾಥ್ ರವರಿಗೆ ಸೇರಿದ ಮನೆಗೆ ಮೇಘರಾಜ್ ಸುಮಾರು 6 ತಿಂಗಳ ಹಿಂದೆ ಬಾಡಿಗೆ ಪಡೆದು ವಾಸಕ್ಕೆ ಬಂದಿದ್ದಾರೆ. ಬಾಡಿಗೆ ವಿಚಾರದಲ್ಲಿ ಮೇಘರಾಜ್ ಹಾಗೂ ಮಂಜುನಾಥ್ ನಡುವೆ ವಿವಾದ ಶುರುವಾಗಿದೆ.ತಾವು ನೀಡಿದ್ದ ಮುಂಗಡ ಹಣ ವಾಪಸ್ ಪಡೆದು ಮನೆ ಖಾಲಿ ಮಾಡಲು ಮೇಘರಾಜ್ ನಿರ್ಧರಿಸಿದ್ದಾರೆ. ಇದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬೀಗ ಜಡಿದು ದರ್ಪ ತೋರಿಸಿದ್ದಾರೆ.ಈ ಕುರಿತಂತೆ ಮೇಘರಾಜ್ ಮೇಟಗಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಮಂಜುನಾಥ್ ರವರನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿ ಬೀಗ ತೆಗೆಸಿದ್ದಾರೆ.ಹೀಗಿದ್ದರೂ ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಮೇಘರಾಜ್ ರವರು ಕುಟುಂಬ ಸಮೇತ ತಮ್ಮ ಸ್ವಂತ ಊರಾದ ಕಬ್ಬಳಿಗೆರೆಗೆ ತೆರಳಿದ್ದಾರೆ.ಹಿಂದಿರುಗಿ ಬರುವಷ್ಟರಲ್ಲಿ ಮಂಜುನಾಥ್ ಮತ್ತೆ ಮನೆಗೆ ಬೀಗ ಹಾಕಿದ್ದಾರೆ.ಕಿಟಕಿ ಮೂಲಕ ಮನೆ ಒಳಗೆ ಪರಿಶೀಲಸಿದಾಗ ಪೀಠೋಪಕರಣಗಳ ಸಮೇತ ನಗದು ಚಿನ್ನಾಭರಣ ನಾಪತ್ತೆಯಾಗಿದೆ.ಸುಮಾರು 85 ಗ್ರಾಂ ಚಿನ್ನಾಭರಣ,1.20 ಲಕ್ಷ ನಗದು,ಫ್ರಿಡ್ಜ್,ವಾಶಿಂಗ್ ಮೆಷಿನ್,ಹರ್ಬಲ್ ಪ್ರಾಡಕ್ಟ್ಸ್ ಗಳು ನಾಪತ್ತೆಯಾಗಿದೆ.ನಕಲಿ ಕೀ ಬಳಸಿ ಮಾಲೀಕ ಮಂಜುನಾಥ್ ತಮ್ಮ ಪದಾರ್ಥಗಳನ್ನ ದೋಚಿದ್ದಾರೆಂದು ಮೇಘರಾಜ್ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…

Leave a Reply

Your email address will not be published. Required fields are marked *