ಪೊಲೀಸ್ ಸ್ಟೇಷನ್ ನಲ್ಲಿ ಮಗು ಬಿಟ್ಟು ತಾಯಿ ಎಸ್ಕೇಪ್…ಯಾಕೆ ಗೊತ್ತಾ…?

ಪೊಲೀಸ್ ಸ್ಟೇಷನ್ ನಲ್ಲಿ ಮಗು ಬಿಟ್ಟು ತಾಯಿ ಎಸ್ಕೇಪ್…ಯಾಕೆ ಗೊತ್ತಾ…?

ಮೈಸೂರು,ಜೂ20,Tv10 ಕನ್ನಡ

ಪೊಲೀಸ್ ಠಾಣೆಯಲ್ಲಿ ಹೆತ್ತ ಮಗುವನ್ನ ಬಿಟ್ಟ ತಾಯಿ ಎಸ್ಕೇಪ್ ಆದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪೊಲೀಸ್ ಠಾಣೆಯಲ್ಲಿ ಮಗುವನ್ನ ಬಿಟ್ಟಿದ್ದೇನೆ ತಗೋ ಎಂದು ಪತಿಗೆ ಮೊಬೈಲ್ ನಲ್ಲಿ ತಿಳಿಸಿ ನಾಪತ್ತೆಯಾಗಿದ್ದಾಳೆ.ಪತ್ನಿ ನಾಪತ್ತೆಯಾದ ಹಿನ್ನಲೆ ಪತಿ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಳ್ಳೇಗಾಲದ ನಿವಾಸಿ ಶಶಿಕುಮಾರ್ ರವರಿಗೆ ಇಂತಹ ಕಹಿ ಅನುಭವ ಆಗಿದೆ.ಪತ್ನಿ ಸಿಂಧೂ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ.ಫಾಸ್ಟ್ ಫುಡ್ ವ್ಯವಹಾರ ಮಾಡುವ ಶಶಿಕುಮಾರ್ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಸಿಂಧು ಎಂಬಾಕೆಯನ್ನ ವಿವಾಹವಾಗಿದ್ದರು.ಇವರಿಗೆ ಅದ್ವಿಕ್ ಎಂಬ ಮಗು ಇದೆ.ಜೂನ್ 15 ರಂದು ದಂಪತಿ ಮಗು ಸಮೇತ ಮೈಸೂರಿಗೆ ಬಂದಿದ್ದರು.ಈ ವೇಳೆ ಸ್ನೇಹಿತೆಯ ಜೊತೆ ಹೊರಟು ಮರುದಿನ ಪತಿಗೆ ಫೋನ್ ಮಾಡಿ ಚಾಮುಂಡಿಬೆಟ್ಟಕ್ಕೆ ಹೋಗೋಣ ಎಂದು ಕರೆದಿದ್ದಳು.ಪತ್ನಿಯ ಕರೆಗೆ ಸ್ಪಂದಿಸಿ ಚಾಮುಂಡಿಬೆಟ್ಟದ ಪಾದದ ಬಳಿಗೆ ಬಂದಾಗ ಸಿಂಧು ಕಾಣಿಸಲಿಲ್ಲ.ಪತ್ನಿಗಾಗಿ ಹುಡುಕಾಡುತ್ತಿದ್ದಾಗ ಮೊಬೈಲ್ ನಲ್ಲಿ ಸಂಪರ್ಕಿಸಿದ ಸಿಂಧು ಮಗುವನ್ನ ಕುರುಬಾರಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಟ್ಟಿದ್ದೇನೆ ತಗೋ ಎಂದು ತಿಳಿಸಿ ಸ್ವಿಚ್ ಆಫ್ ಮಾಡಿದ್ದಾಳೆ.ನಜರಬಾದ್ ಠಾಣೆಗೆ ಆಗಮಿಸಿದ ಶಶಿಕುಮಾರ್ ರವರು ಮಗ ಅದ್ವಿಕ್ ನನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.

ಸಿಂಧು ಬೆಂಗಳೂರಿನ ಯುವಕನ ಜೊತೆ ಸ್ನೇಹ ಬೆಳೆಸಿಕೊಂಡಿದ್ದು ಆತನ ಜೊತೆ ಹೋಗಿರಬಹುದೆಂದು ಶಂಕಿಸಲಾಗಿದೆ.ಈ ಬಗ್ಗೆ ಶಶಿಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *